ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟು ನೋಡಿ: ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ಧಾರವಾಡ: ಹುಬ್ಬಳ್ಳಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟು ನೋಡಿ ಎಂದು ಧಾರವಾಡದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ವಿಚಾರವಾಗಿ ಮಾತನಾಡಿದ ಅವರು, ಶಾಸಕಾಂಗ ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ. ಪೊಲೀಸ ಅಧಿಕಾರಿಗಳನ್ನು ತಮಗೇ ಬೇಕಾದವರನ್ನು ಹಾಕಿಕೊಳ್ಳುತ್ತಾರೆ. ಎಂಎಲ್ಎ, ಮಿನಿಸ್ಟರ್ ಗಳು ತಮಗೆ ಬೇಕಾದವರನ್ನು ಹಾಕೋತಾರೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಆದರೆ ಲಕ್ಷಾಂತರ ರೂಪಾಯಿ ಪಡೆದುಕೊಂಡು ಹಾಕಿಕೊಳ್ಳುತ್ತಾರೆ. ಹಾಗೆ ಬಂದವನ ನಿಷ್ಠೆ ಯಾರಿಗೆ ಇರುತ್ತೆ? ಎಂದು ಪ್ರಶ್ನಿಸಿದರು.

ತನಗೆ ತಂದವರಿಗೆ ಸೆಲ್ಯೂಟ್ ಹೊಡಿತಾ ಇರುತ್ತಾರೆ. ಅಂತಹ ಇನ್ಸ್ಪೆಕ್ಟರ್ ಕಮೀಷನರ್ ಮಾತು ಕೇಳ್ತಾನಾ? ಎಂಎಲ್ ಎ, ಮಿನಿಸ್ಟರ್ ಮನೆ ಕಾಯುತ್ತಾ ಇರ್ತಾರೆ. ಇದು ಗಮನ ಬೇರೆ ಸೆಳೆಯುವ ಯತ್ನ ಸರ್ಕಾರದಲ್ಲಿ ಭ್ರಷ್ಟಾಚಾರ ನಡೀತಾ ಇದೆ ಇಂತಹುದು ಆದ್ರೆ ಜನ ಇದನ್ನೇ ಮಾತನಾಡುತ್ತಾರೆ. ಅದನ್ನು ಮರೆತು ಬಿಡ್ತಾರೆ. ಜೋಡಣೆ ಮಾಡುವುದು ಇವರಿಗೆ ಗೊತ್ತಿಲ್ಲ ವಿಭಜನೆ ಮಾಡುತ್ತಿದ್ದಾರೆ. ಜನರ ಮುಗ್ಧತೆ, ಒಳ್ಳೆತನವೆ ಇವರಿಗೆ ಬಂಡವಾಳ ಆಗಿದೆ. ಹುಬ್ಬಳ್ಳಿ ಘಟನೆ ತಡೆಯೋಕೆ ಆಗತಾ ಇರಲಿಲ್ಲವಾ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಒಂದೇ ತಾಯಿ ಮಕ್ಕಳು ಒಂದೂವರೆ ವರ್ಷದ ಹಿಂದೆ ಇದೆಲ್ಲ ಇರಲಿಲ್ಲ ಸರ್ಕಾರಕ್ಕೆ ಸಮಾಜಘಾತುಕ ಶಕ್ತಿಗಳ ಮೇಲಿನ ಹಿಡಿತ ತಪ್ಪಿದೆ ಎಂದು ದೂರಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/04/2022 05:59 pm

Cinque Terre

98.97 K

Cinque Terre

6

ಸಂಬಂಧಿತ ಸುದ್ದಿ