ಧಾರವಾಡ: ಸಿಎಫ್‌ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ಎಂಬುವವರು ಹಿಜಾಬ್ ವಿಷಯದ ಕುರಿತು ಹೈಕೋರ್ಟ್ ಕೊಟ್ಟ ತೀರ್ಪಿನ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ವಕೀಲರ ಸಮೇತ ಧಾರವಾಡ ಹೈಕೋರ್ಟ್‌ಗೆ ಬಂದ ಮುತಾಲಿಕ್ ಅವರು, ಅತಾವುಲ್ಲಾ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಅಡಿಶನಲ್ ಅಡ್ವೋಕೇಟ್ ಜನರಲ್ ಅವರಲ್ಲಿ ಪರವಾನಿಗಿ ಕೇಳಿದ್ದಾರೆ. ಅಲ್ಲದೇ ಅಡಿಶನಲ್ ಅಡ್ವೋಕೇಟ್ ಜನರಲ್ ವಿದ್ಯಾವತಿ ಅವರಿಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಪರವಾನಿಗಿ ಬೇಕಾಗುವುದರಿಂದ ಸದ್ಯ ಮುತಾಲಿಕ್ ಅವರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಬೆಂಗಳೂರಿಗೆ ಕಳುಹಿಸಿಕೊಡುವುದಾಗಿ ಹೇಳಿದ್ದು, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಪರವಾನಿಗಿ ಸಿಗುತ್ತದೆ ಎಂಬ ವಿಶ್ವಾಸವನ್ನು ಮುತಾಲಿಕ್ ವ್ಯಕ್ತಪಡಿಸಿದ್ದಾರೆ.
ನಾನೇ ಸ್ವತಃ ಬೆಂಗಳೂರು ಕೋರ್ಟ್‌ಗೆ ಹಾಜರಾಗುತ್ತೇನೆ. ನ್ಯಾಯಾಂಗ ನಿಂದನೆ ಮಾಡಿದವರ ಮೇಲೆ ಕ್ರಮ ಆಗಬೇಕು. ಹೈಕೋರ್ಟ್ ತೀರ್ಪನ್ನು ಅಸಂವಿಧಾನಿಕ ತೀರ್ಪು ಎಂದು ಉಲ್ಲೇಖಿಸಿದ್ದಾರೆ. ಹಿಜಾಬ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಲು ಅವರಿಗೆ ಅವಕಾಶವಿದೆ. ಅದನ್ನು ಬಿಟ್ಟು ತೀರ್ಪಿನ ವಿರುದ್ಧ ಮಾತನಾಡಿದ್ದಾರೆ. ಕೋರ್ಟ್‌ನ್ನು ಗೌರವಿಸದೇ ಅದಕ್ಕೆ ಅಗೌರವ ತೋರಿದ್ದಾರೆ ಎಂದು ಮುತಾಲಿಕ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/03/2022 03:11 pm