ಅಣ್ಣಿಗೇರಿ : ಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಣೆ ಮಾಡಲಾಗುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತ ಮಾಡಿ ವಿತರಣೆ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ಯಾರೆ ಎನ್ನದಿರುವದು ಸ್ಥಳೀಯರ ಆರೋಪಕ್ಕೆ ಕಾರಣವಾಗಿದೆ. ಹೌದು... ಕಳೆದ ಸೋಮವಾರ ಪಟ್ಟಣದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಅಪಾರ ಪ್ರಮಾಣದಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ಗೋಧಿ ಚೀಲಗಳು ಮಳೆ ನೀರಿಗೆ ಸಿಲುಕಿ ಹಾನಿಯಾದ ವರದಿಯಾಗಿತ್ತು. ಹಾನಿಯಾದ ಅಕ್ಕಿ ಮತ್ತು ಗೋಧಿಯನ್ನು ಸರಿಪಡಿಸಲು ಜನತಾ ಬಝಾರ ಮ್ಯಾನೇಜರ ಡಿ.ಬಿ.ಇನಾಮತಿ ಅವರು ಪ್ರತಿ ವ್ಯಕ್ತಿಗೆ ಒಂದು ಕೆ.ಜಿ ಅಕ್ಕಿ ಮತ್ತು ಅರ್ಧ ಕೆ.ಜಿ ಗೋಧಿಯನ್ನು ಕಡಿತ ಮಾಡಿ ವಿತರಣೆ ಮಾಡುತ್ತಿರುವದು ಕಾನೂನುಬಾಹಿರವಾಗಿದ್ದರೂ ಕೂಡಾ ಸಂಬಂಧಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರಿವದನ್ನ ಕಂಡ ತಾಲೂಕು ಜಯ ಕರ್ನಾಟಕ ಸಂಘದವರು ಆರೋಪ ಮಾಡುತ್ತಿದ್ದಾರೆ. ಅಕ್ಕಿ, ಗೋಧಿಯನ್ನು ಕಡಿತ ಮಾಡಿ ವಿತರಣೆ ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ ಮತ್ತು ಇದಕ್ಕೆ ಯಾರು ಹೊಣೆ ಎಂದು ಸಂಘಟನೆ ತಾಲೂಕಾಧ್ಯಕ್ಷ ಮುತ್ತು ಕುಲಕರ್ಣಿ ಪ್ರಶ್ನೀಸಿದ್ದಾರೆ.
ಈ ಕುರಿತು ತಾಲೂಕಾ ಆಹಾರ ನಿರೀಕ್ಷಕ ರಾಜೇಂದ್ರ ದೊಡ್ಡಮನಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ, ಇದರ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ಯಾರಾದರೂ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರೆ ವಿಚಾರಣೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.ಭಾನುವಾರ ಮತ್ತು ಸೋಮವಾರ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಪಡಿತರ ವಿತರಣೆ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು . ನ್ಯಾಯಬೆಲೆ ಅಂಗಡಿಯೊಳಗೆ ಮಳೆ ನೀರು ನುಗ್ಗಿ ಹಾನಿಯಾದ ಘಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಜಿಲ್ಲಾ , ತಾಲೂಕು ಮಟ್ಟದ ಅಧಿಕಾರಿಗಳು ಬೇಟಿ ನೀಡಿ ವರದಿ ಪಡೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ಮಾತಾಗಿದೆ.
Kshetra Samachara
25/10/2021 10:23 pm