ಹುಬ್ಬಳ್ಳಿ: ಮಸೀದಿ ಹಾಗೂ ಹಿಂದೂ ಧರ್ಮದ ಮಂದಿರಗಳಲ್ಲಿ ಧ್ವನಿ ವರ್ಧಕವನ್ನು ಬಳಸಬಾರದು ಎಂಬ ಆದೇಶದ ಹಿನ್ನೆಲೆಯಲ್ಲಿ, ಹೆಚ್ಚಾಗಿ ಮಂದಿರಗಳಿಗೆ ನೋಟಿಸ್ ನೀಡಿದ್ದಾರೆ. ಅದೇ ರೀತಿ ಮಸೀದಿಗಳ ಮೇಲಿನ ಮೈಕ್ ತೆರವಿಗೆ ಸರ್ಕಾರ ಮುಂದಾಗಬೇಕು. ಮೇ 9ರವರೆಗೆ ಕೊನೆಯ ಗಡುವು ನೀಡಿದೆ. ಮೈಕ್ ತೆರವುಗೊಳಿಸದಿದ್ದರೆ, ನಾವು ಬೆಳಗ್ಗೆ 5 ಗಂಟೆಯಿಂದಲೇ ಭಕ್ತಿಗೀತೆಗಳು ಮೊಳಗಲಿವೆ. ಹಿಂದೂ ದೇವಸ್ಥಾನಗಳ ಮೈಕ್ ಹಚ್ಚುತ್ತೇನೆ. ಅಂದು ಓಂಕಾರ, ಭಜನೆ, ಸುಪ್ರಭಾತ ಹೀಗೆ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಸೀದಿ ಗಳಿಗೆ ನೆಪ ಮಾತ್ರಕ್ಕೆ ನೊಟೀಸ್ ನೀಡಿದ್ದಾರೆ. ಇದು ಕಣ್ಣೊರೆಸುವ ತಂತ್ರ. ಒಂದು ವೇಳೆ ಅಂದು ಬೆಳಿಗ್ಗೆ ದೇವಸ್ಥಾನಗಳ ಬಳಿ ಮೈಕ್ ತೆರವಿಗೆ ಬಂದ್ರೆ ಸುಮ್ಮನಿರಲ್ಲ. ಪೊಲೀಸರು ಮೊದಲು ಮಸೀದಿಗಳ ಬಳಿ ಹೋಗಿ ಆಮೇಲೆ ಮಂದಿರಗಳತ್ತ ಬರಲಿ ಎಂದ ಗಡುವು ಕೊಟ್ಟರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/04/2022 02:31 pm