ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪ್ರಮೋದ್ ಮುತಾಲಿಕ್ ಅವರನ್ನ ಜಿಲ್ಲೆಯಿಂದ ಅಲ್ಲ ರಾಜ್ಯದಿಂದ ಗಡಿಪಾರು ಮಾಡಿ - ಜಾಗೃತ ನಾಗರಿಕ ವೇದಿಕೆ ಆಗ್ರಹ

ಧಾರವಾಡ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನೆಲೆ ಘಟನೆ ಕುರಿತು ನಿಷ್ಪಕ್ಷಪಾತ ಸಮಗ್ರ ತನಿಖೆ ನಡೆಸಬೇಕು. ಸಮಾಜಗಾತುಕ ಶಕ್ತಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಂಡು, ಈ ಕೇಸ್ ನಲ್ಲಿ ಸಿಲುಕಿರುವ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಜಾಗೃತ ನಾಗರಿಕ ವೇದಿಕೆ ಸಂಚಾಲಕ ವೆಂಕನಗೌಡ ಪಾಟೀಲ ಆಗ್ರಹ ಪಡಿಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಪ್ರಕರಣ ಇದೊಂದು ವ್ಯವಸ್ಥಿತ ಸಂಚು, ಈ ಪ್ರಕರಣದಲ್ಲಿ ಅಮಾಯಕರು ಸಿಲುಕಿಕೊಂಡಿದ್ದಾರೆ. ಈ ಘಟನೆ ಪ್ರಕರಣ ಒಂದು ಧರ್ಮವನ್ನು ಅವಹೇಳನ ‌ಮಾಡುವಂತದ್ದಾಗಿದೆ. ಹುಬ್ಬಳ್ಳಿ ಘಟನೆ ವ್ಯವಸ್ಥಿತ ಸಂಚು, ಅಭಿಷೇಕ ಹಿರೇಮಠ ಪೋಸ್ಟ್ ಹಾಕಿದ್ದು ಈತನ ಹಿಂದೆ ಯಾರಿದ್ದಾರೆ? ಆಡಳಿತ ಪಕ್ಷದ ನಾಯಕರು ಇದ್ದಾರೆವೆಂಬುದರ ಬಗ್ಗೆ ನಮಗೆ ಸಂಶಯವಿದೆ. ಬಿಜೆಪಿ ಇದಕ್ಕೆ ನೇರ ಹೊಣೆಯಾಗಿದ್ದು, ಮುಂದಿನ ಚುನಾವಣೆಗೆ ದೃಷ್ಟಿಯಿಂದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪ ಮಾಡಿದರು.

ಶ್ರೀರಾಮ ಸೇನೆ ಮುಖಸ್ಥ ಪ್ರಮೋದ್ ಮುತಾಲಿಕ ನಿರಂತರ ಕೋಮು ಗಲಭೆ ಹೇಳಿಕೆ ನೀಡುತ್ತಿದ್ದಾರೆ. ಇವರ ಮೇಲೆ ಸುಮೋಟೋ ಕೇಸ್ ಹಾಕಬೇಕು. ಮುತ್ತಾಲಿಕ ಜಿಲ್ಲೆಯಿಂದ ಅಲ್ಲ ರಾಜ್ಯದಿಂದ ಗಡಿಪಾರು ಮಾಡಬೇಕು, ಅಲ್ಲದೆ ಹುಬ್ಬಳ್ಳಿ ಗಲಭೆ ಮಾಡಿದವರ ವಿಚಾರಣೆ ಮಾಡಲಿ, ಕಲ್ಲು ತೂರಾಟದಲ್ಲಿ ಮುಸುಕುದಾರಿಗಳು ಯಾರು? ಹೈಮಾಸ್ಕ್ ವಿದ್ಯುತ್ ಬಂದ್ ಆಗಿದ್ದು ಹೇಗೆ? ದೇವಸ್ಥಾನಕ್ಕೆ ಕಲ್ಲು ತೂರಿದವರು ಯಾರು? ಆ ಸಂದರ್ಭದ ದುರ್ಲಾಭ ಪಡೆಯುವುದಕ್ಕೆ ಹಿಂದೂ ಸಂಘಟನೆಗಳ ಬಂದಿದ್ದರು. ಇದರ ಬಗ್ಗೆ ತನಿಖೆ ನಡಿಸಿ, ಅಮಾಯಕರ ಬಿಡುಗಡೆ ಮಾಡಬೇಕು.

ಕೆಲವು ಸಾಮಾಜಿಕ ಜಾಲತಾಣದಲ್ಲಿ ಕೆಲ ಪೇಜ್ ಗಳು ಬಹಳ ಆ್ಯಕ್ಟಿವ್ ಆಗಿದ್ದಾವೆ, ಕೋಮುವಾದಿ ಸಂಘಟನೆಗಳು ಪೇಜ್ ಮಾಡಿಕೊಂಡು ವಿಷಬೀಜ ಬಿತ್ತುತ್ತಾರೆ. ಇಂಟೆಲಿಜೆನ್ಸ್ ಪೇಲ್ಯೂವರ್ ಆಗಿದೆ, ನಿರಂತರವಾಗಿ ಒಂದು ಧರ್ಮದ ಮೇಲೆ ದಾಳಿ ಮಾಡಲಾಗುತ್ತಿದೆ. ಸರ್ಕಾರ ಮುಲಾಜಿಲ್ಲದೆ ಕ್ರಮ‌ ಕೈಗೊಳ್ಳಬೇಕು, ಈ ಪ್ರಕರಣದಲ್ಲಿ ಪೊಲೀಸರನ್ನು ಸಮಾಜ ನಂಬಿದೆ. 146 ಜನ ಆರೋಪಿಗಳ ಮುಲಾಜಿಲ್ಲದೇ ಕ್ರಮ‌ ಕೈಗೊಳ್ಳಿ ಅಮಾಯಕರ ಬಿಡುಗಡೆ ಮಾಡಬೇಕು ಎಂಬ ಆಗ್ರಹ ಮಾಡಿದರು.

Edited By :
Kshetra Samachara

Kshetra Samachara

25/04/2022 01:23 pm

Cinque Terre

76.25 K

Cinque Terre

130

ಸಂಬಂಧಿತ ಸುದ್ದಿ