ಹುಬ್ಬಳ್ಳಿ: ನೋಡ್ರಿ ನೋಡ್ರಿ ನಮ್ಮ ಧಾರವಾಡ ಜಿಲ್ಲೆಯ ನೂತನ ಮಂತ್ರಿಯಾಗಿ ಮೊದಲ ಬಾರಿಗೆ ಹುಬ್ಳಿಗೆ ಬಂದಾರಾ. ಆದ್ರ ಅವರಿಗೆ ಕೊರೊನಾ ರೂಲ್ಸ್ ಮರೆತ ಬಿಟ್ಟಾರ ನೋಡ್ರಿ ಪಾ....
ಹೌದರಿ ಇವತ್ತ ಸಚಿವರಾಗಿ ಶಂಕರ ಪಾಟೀಲ ಮುನೆನಕೊಪ್ಪ ಅವರು ಹುಬ್ಳಿಗೆ ಬಂದಾರಾ. ಮುನೆನಕೊಪ್ಪ ಸಾಹೆಬ್ರಿಗೆ ಅಭಿಮಾನಿಗಳು ಹೆಚ್ಚಿದ್ದಾರೆ ಎನ್ನುವುದು ಗೊತ್ತು ಆದ್ರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತನ್ನೇ ಗಾಳಿಗೆ ತೂರಿದ್ರಾ ಇವರು ಅಂತೆ....
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬರುತ್ತಿದೆ ಎಂದು ಜನ ಭಯಬೀತರಾಗಿದ್ದಾರಾ. ಅಷ್ಟಕ್ಕೂ ನಿನ್ನೆ ಸಿಎಂ ಅವರೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮತ್ತು ಗಡಿಭಾಗದಲ್ಲಿ ವಿಕೆಂಡ್ ಲಾಕ್ ಡೌನ್ ಮಾಡಿದ್ದಾರೆ. ಎಲ್ಲರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಅಂತ ನಿಯಮ ಹೊರಡಿಸಿದ್ದಾರಾ. ಸರ್ಕಾರ ಇಷ್ಟೆಲ್ಲಾ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು ಕೂಡಾ, ನಮ್ಮ ನೂತನ ಸಚಿವರು ಮಾತ್ರ ನಮಗೆ ಅದಕ್ಕೆ ಸಂಬಂಧ ಇಲ್ಲದಂತೆ ವರ್ತನೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಹೇಳಿ ನೀವೆ.
ಅಲೆಲೆ ಕೇಳಿದ್ರೆಲ್ಲಾ ನೀವೆ, ಈಗ ಧಾರವಾಡದಲ್ಲಿ ಕೊರೊನಾ ಪಾಠ ಮಾಡಲು ಹೋಗ್ತಿದ್ದಾರಂತೆ, ಆದರೆ ಅವರೆ ಇಲ್ಲೆ ರೂಲ್ಸ್ ಗೆ ಕ್ಯಾರೆ ಮಾಡಿಲ್ಲಾ,, ಇನ್ನ ಅಲ್ಲೆ ಜಾಗೃತಿ ಮೂಡಿಸಲು ಹೋಗುತ್ತಿರುವುದು ಎಷ್ಟರ ಮಟ್ಟಿಗೆ ವಿಪರ್ಯಾಸ ನೋಡ್ರಿ......
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್
Kshetra Samachara
07/08/2021 02:01 pm