ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ಕುಲಕರ್ಣಿಗೆ ಸಿಗದ ರಿಲೀಫ್- ಇನ್ನೂ 14 ದಿನ ನ್ಯಾಯಾಂಗ ಬಂಧನ

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ನ್ಯಾಯಾಲಯದಿಂದ ರಿಲೀಫ್ ಸಿಗದಂತಾಗಿದೆ.

ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಸಿಬಿಐ ಅಧಿಕಾರಿಗಳು ಬೆಳಗಾವಿ ಹಿಂಡಲಗಾ ಜೈಲಿನಿಂದಲೇ ವಿನಯ್ ಅವರನ್ನು ವೀಡಿಯೋ ಕಾನ್ಫರನ್ಸ್ ಮೂಲಕ ಧಾರವಾಡದ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.

ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಡಿ.21ರ ವರೆಗೆ ಅಂದರೆ ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿತು. ಇದೇ ಡಿ. 9 ರಂದು ವಿನಯ್ ಅವರ ಜಾಮೀನು ಅರ್ಜಿ ಕೂಡ ವಿಚಾರಣೆ ನಡೆಯಲಿದೆ.

Edited By : Vijay Kumar
Kshetra Samachara

Kshetra Samachara

07/12/2020 03:53 pm

Cinque Terre

59.08 K

Cinque Terre

7

ಸಂಬಂಧಿತ ಸುದ್ದಿ