ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅಲ್ಲಿ ಡಿಕೆಶಿ ಮನೆ ಮೇಲೆ ದಾಳಿ,ಇಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಕಲಘಟಗಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ಧ ರಾಜಕೀಯ ದುರುದ್ದೇಶದಿಂದ ಸಿಸಿಬಿ,ಸಿಬಿಐ,ಐಟಿ ಹಾಗೂ ಇಡಿ ರೇಡ ಮಾಡಿಸಿರುವ ಬಿಜೆಪಿ ಸರಕಾರ ರಾಜಕೀಯ ಷಡ್ಯಂತ್ರ ಮತ್ತು ಗೂಂಡಾ ರಾಜಕೀಯ ಮಾಡುತ್ತಿದೆ ಎಂದು ವಿಧಾನ ಪರಿಷತ್ತ ಮಾಜಿ ಸದಸ್ಯ ನಾಗರಾಜ ಛಬ್ಬಿ ಬಣದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಪಟ್ಟಣದ ಹನುಮಾನ್ ದೇವಸ್ಥಾನದ ಹತ್ತಿರ ಬಿಜೆಪಿ ಸರಕಾರಗಳ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು.ಮುಖಂಡರಾದ ಅಣ್ಣಪ್ಪ ಓಲೆಕಾರ ಮಾತನಾಡಿ,ಬಿಜೆಪಿ ಸರಕಾರ ಅಧಿಕಾರ ಬಳಸಿ ಡಿ.ಕೆ.ಶಿವಕುಮಾರ ಅವರ ಮನೆಯ ಮೇಲೆ ದಾಳಿಮಾಡಿರುವ ಕ್ರಮವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಗುರುನಾಥ ದಾನೆನ್ನವರ,ಶಾಂತಲಿಂಗ ಬೆರೂಡಗಿ,ಮಹಿಳಾ ಘಟಕದ ಅಧ್ಯಕ್ಷೆ ಸಂಗವ್ವ ಕುರುಬರ,ಶಿವಲಿಂಗವ್ವ,ಶರಣಪ್ಪ ಮಡಿವಾಳರ,ಗಂಗಾಧರಯ್ಯ ಹಿರೇಮಠ,ಬಸವರಾಜ ಹಡಪದ,ಮಂಜು ಅಂಗಡಿ,ರಾಮಣ್ಣ ಬಾರಕೆರ,ಮಲ್ಲಿಕಾರ್ಜುನ ಬಡಿಗೇರ,ಆನಂದ ನಾರಾಯಣಪುರ,ಅಶೋಕ ಬಾಪ್ಕಾರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Edited By : Manjunath H D
Kshetra Samachara

Kshetra Samachara

05/10/2020 06:27 pm

Cinque Terre

14.74 K

Cinque Terre

3

ಸಂಬಂಧಿತ ಸುದ್ದಿ