ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಂದ ಮಳೆಯಲ್ಲಿಯೇ ಪ್ರತಿಭಟನಾ ಜಾಥಾ

ಕಲಘಟಗಿ:ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಪ್ರತಿಭಟನಾ ಜಾಥಾವನ್ನು ಸೋಮವಾರ ನಡೆಸಿದರು.

ಪಟ್ಟಣದ ಸಿಡಿಪಿಓ ಕಚೇರಿಯಿಂದ ತಹಶಿಲ್ದಾರರ ‌ಕಚೇರಿವರೆಗೆ ಪ್ರತಿಭಟನಾ ಜಾಥಾವನ್ನು‌‌ ಮಳೆಯಲ್ಲಿಯೇ ನಡೆಸಲಾಯಿತು.

ಸರಕಾರಿ ಪಬ್ಲಿಕ್ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಸರಕಾರ ಪ್ರಾರಂಭಿಸುವ ಪ್ರಕ್ರಿಯೆ ನಡೆಸಿರುವುದು ವಿಷಾಧನೀಯ, ಅಂಗನವಾಡಿಗಳಲ್ಲಿಯೇ ಎಲ್ ಕೆ ಜಿ ಹಾಗೂ ಯುಕೆಜಿ ಪ್ರಾರಂಭಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿ ಮನವಿ ನೀಡಲಾಯಿತು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ವತಿಯಿಂದ ಮನವಿಯನ್ನು ತಹಶೀಲ್ದಾರ ಅಶೋಕ ಶಿಗ್ಗಾವಿ ಅವರಿಗೆ ನೀಡಲಾಯಿತು.

Edited By :
Kshetra Samachara

Kshetra Samachara

21/09/2020 08:28 pm

Cinque Terre

13.28 K

Cinque Terre

0

ಸಂಬಂಧಿತ ಸುದ್ದಿ