ಹುಬ್ಬಳ್ಳಿ: ಒಂದ್ಕಡೆ ರೋಡ ತುಂಬ ತೆಗ್ಗ. ಇನ್ನೊಂದಕಡೆ ಲೈಟಿನ್ ಕಂಬ ಇದ್ದರು ಲೈಟ್ ಹತ್ತಂಗಲ್ಲ. ಇನ್ನ ರಾತ್ರಿ ಹೊತ್ತ ಈ ರೋಡನ್ಯಾಗ ಹೆಣ್ಣ ಮಕ್ಕಳಿಗೆ ಹೋಗಕ ಹೆದರಿಕಿ. ಇವೆಲ್ಲ ಕಂಡುಬರೂದು ನಮ್ಮ ಸ್ಮಾರ್ಟ್ ಸಿಟಿ ಅಂತಾ ಕಿರೀಟಾ ಹೊತ್ತ ನಮ್ಮ ಹುಬ್ಬಳ್ಳಯಾಗ ಅಂದ್ರ ನೀವು ನಂಬಬೇಕ ನೋಡ್ರಿ... ಏ ಏನೋ ಮಾರಾಯ ನಮ್ಮ ಹುಬ್ಬಳ್ಳ್ಯಾಗ ಇಂತ ರೋಡ ಎಲ್ಲಿ ಐತಿ ಅಂತೀರ್ ಏನ್ರೀ...ಹಂಗ ಅಂದ್ರ ತೋರಿಸ್ತೀವಿ ನೋಡ್ರಿ ಪಾ ಯಾವ ರೋಡ್ ಅಂತಾ...
ನಿವೇನರಿಪಾ ನಮ್ಮ ಹುಬ್ಬಳ್ಳಿ ರಸ್ತೆ ಅಂತಾ ಸುಳ್ಳ ಬ್ಯಾರೇ ಕಡೆ ರಸ್ತೆ ತೋರಿಸಾಕುಂತೀರಿ ಅದ್ಕೊಂಡಿರಬೇಕು. ಆದ್ರ ಇದು ನಮ್ಮ ಹುಬ್ಬಳ್ಳಿ ರಸ್ತೆ ಅಂದ್ರ ನೀವು ನಂಬಬೇಕು. ಯಾಕಂದ್ರ ಇದ ನಮ್ಮ ಹುಬ್ಬಳ್ಳಿಯ ಕಾಟನ್ ಮಾರ್ಕೇಟ್ ನ್ಯಾಗ ಹಾಸಿ ಕಿಮ್ಸ್ ದವಾಖಾನಿಗೆ ಹೋಗು ರೋಡ್ ಐತ್ರಿ ನೋಡರಿಪಾ, ರೋಡ್ ತುಂಬಾ ತೆಗ್ಗ, ಲೈಟಿನ್ ಕಂಬ ಇದ್ದರೂ ಒಂದು ಲೈಟ್ ನೆಟ್ಟಗ ಹತ್ತಂಗಿಲ್ಲ. ಇಂತಹಾ ಕತ್ತಲದಾಗ ಪೇಶೆಂಟ್ ಕರ್ಕೊಂಡು ದವಾಖಾನಿಗೆ ಹೋಗೋರು, ಟ್ಯೂಷನ್ ಹೋಗು ಹೆಣ್ಣು ಮಕ್ಕಳ ಓಡ್ಯಾಡಾಕ್ ಹೆದರಿಕೆ ಅಕ್ಕೇತ್ರಿ ಅಂತಾರ್ ನೋಡ್ರಿ.
ಸ್ಮಾರ್ಟ್ ಸಿಟಿ ಅಂತಾ ಹೇಳಿ ಕೋಟಿ ಕೋಟಿ ಬಂದ ರೊಕ್ಕಾ ಎಲ್ಲಿ ಹೋಂಟೆತಿ ಅನ್ನೋದು ಗೊತ್ತಾಗವಲ್ವದ ಹಂಗ ಆಗೇತ್ರಿ, ಅದಕ್ಕ ಇವತ್ತು ರಜತ ಉಳ್ಳಾಗಡ್ಡಿಮಠ ಅದ ರೋಡನ್ಯಾಗ ಪಂಜು ಮತ್ತ ಮ್ಯಾಣಬತ್ತಿ ಹಿಡ್ಕೊಂಡು ನಮಗ ಬೀದಿ ದೀಪ ಬೇಕ ಬೇಕ ಅಂತಾ ಹೇಳಿ ವಿದ್ಯಾರ್ಥಿಗಳ ಜೊತಿ ಸೇರಿ ಡಿಫರೆಂಟ್ ಸ್ಟ್ರೈಕ್ ಮಾಡ್ಯಾರ.
ಈ ಸುದ್ದಿ ನೋಡಿದ ಮ್ಯಾಲ್ ಆದ್ರೂ ಸಂಬಂಧ ಪಟ್ಟ ಶಾಸಕರು, ಸಂಸದರು ಮತ್ತ ಕಾರ್ಪೊರೇಷನ್ ಅಧಿಕಾರಿಗಳ ಈ ರಸ್ತೆ ರಿಪೇರಿ ಮಾಡಿ ಲೈಟ್ ಹಾಕ್ತಾರೋ ಇಲ್ಲ ಹಂಗ ಬಿಡ್ತಾರೋ ಅಂತಾ ಕಾದ ನೋಡಬೇಕಾಗೇತಿ ನೋಡ್ರಿಪಾ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
15/09/2022 10:40 pm