ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಭೆಗೇ ಸೀಮಿತವಾದ ಕುಡಿಯುವ ನೀರಿನ ಖಾಸಗೀಕರಣ!; ಯಾವಾಗ ಜ್ವಲಂತ ಸಮಸ್ಯೆಗೆ ಪರಿಹಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಜನರು ಕುಡಿಯುವ ನೀರಿಗಾಗಿ ದಿನವೂ ಹೋರಾಟ ನಡೆಸುವಂತಾಗಿದೆ. ಜಲಮಂಡಳಿಯಿಂದ ನೀರು ಸರಬರಾಜು ಜವಾಬ್ದಾರಿಯನ್ನು ಖಾಸಗೀಕರಣ ಮೂಲಕ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದ್ದು,ಇದರಿಂದ ಜನರು ದಿನವೂ ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ. ಈಗಾಗಲೇ ಪಾಲಿಕೆ ಸಾಕಷ್ಟು ಬಾರಿ ಸಭೆ ಮಾಡಿದೆ. ಈ ಹಿಂದೆ ಹಸ್ತಾಂತರ ಕೂಡ ಮಾಡಿದ್ದರೂ ಜನರ ಬವಣೆ ಮಾತ್ರ ಬಗೆಹರಿಯುತ್ತಿಲ್ಲ.

ಹೌದು... ಹಳೆ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್‌.ಎಂ. ಕೃಷ್ಣನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ ಸೇರಿದಂತೆ ವಿವಿಧೆಡೆ ಸುಮಾರು ದಿನಗಳಿಂದ 7 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತದೆ.

ಅಲ್ಲದೆ, ಉಣಕಲ್ ಗ್ರಾಮದ ವೀರಭದ್ರೇಶ್ವರ ಕಾಲೊನಿಯಲ್ಲಿ ವಾಟರ್ ಟ್ಯಾಂಕರ್ ಬರದೇ ಇದ್ದರೆ ಜನರು ಕುಡಿಯಲು ನೀರು ಕಾಣುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಸಾಕಷ್ಟು ಬಾರಿ ಸಭೆ ನಡೆಸಿರುವ ಪಾಲಿಕೆ ಆಯುಕ್ತರು ಯೋಜನೆ ಸಭೆಗೆ ಮಾತ್ರ ಸೀಮಿತವಾಗಿದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ.

ಇತ್ತೀಚೆಗೆ ಖಾಸಗಿ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ ಕಾರ್ಪೊರೇಟರ್ ಕೂಡ ಅಸಮಾಧಾನ ಹೊರಹಾಕಿದ್ದರು. ಸಭೆಯಲ್ಲಿ ಸಮಜಾಯಿಷಿ ಹೇಳುವುದು ಬೇಡ, ಕಾರ್ಯರೂಪಕ್ಕೆ ತನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ನವದೆಹಲಿಯಲ್ಲಿ ಕೂಡ ಸಚಿವರು ಸಭೆ ನಡೆಸಿ ತಾಕೀತು ಮಾಡಿದ್ದರು. ಆದರೂ ಜನರ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

ಒಟ್ಟಿನಲ್ಲಿ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಧ್ವನಿ ಎತ್ತಬೇಕಿದೆ‌. ಕೂಡಲೇ ಟ್ಯಾಂಕರ್ ವ್ಯವಸ್ಥೆಗೆ ಬ್ರೇಕ್ ಹಾಕಿ ಕುಡಿಯುವ ನೀರನ್ನು ಒದಗಿಸುವ ಕಾರ್ಯ ಮಾಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

29/06/2022 08:22 pm

Cinque Terre

45.7 K

Cinque Terre

8

ಸಂಬಂಧಿತ ಸುದ್ದಿ