ನವಲಗುಂದ : ನವಲಗುಂದ ಪುರಸಭೆ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಅದಕ್ಕೆ ಪಟ್ಟಣದ ಗಾಂಧೀ ಮಾರುಕಟ್ಟೆ ಬಳಿಯ ಈ ಸಾರ್ವಜನಿಕ ಮೂತ್ರಾಲಯ ಸಹ ಒಂದು ಸಾಕ್ಷಿ ಎನ್ನಬಹುದು. ಆದರೆ ನಿರ್ಮಾಣದ ನಂತರ ಮೂತ್ರಾಲಯದ ನಿರ್ವಹಣೆ ಮಾಡಲಾಗುತ್ತಿದೆಯಾ ಅಂದ್ರೆ ಬಿಲ್ಕುಲ್ ಇಲ್ಲಾ ಅನ್ನೋ ಮಾತುಗಳು ಸ್ಥಳೀಯರಲ್ಲಿ ಕೇಳಿ ಬರುತ್ತಿದೆ.
ಎಸ್... ನವಲಗುಂದ ಪುರಸಭೆ ಕಳೆದ ಹಲವು ತಿಂಗಳ ಹಿಂದೆ ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆ ಬಳಿ ಅಚ್ಚುಕಟ್ಟಾದ ಮೂತ್ರಾಲಯದ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿ ಕೊಟ್ಟಿತ್ತು. ಇಷ್ಟಾದರೂ ಕೆಲವು ಸಾರ್ವಜನಿಕರು ಹೊರಗಡೆ ಮೂತ್ರ ಮಾಡುವ ದೃಶ್ಯಗಳು ಸಹ ಕಂಡು ಬಂದಿದ್ದವು. ಆದರೆ ಈಗ ಮೂತ್ರಾಲಯದ ಸ್ವಚ್ಛತೆ ಆಗದೇ ಇರುವ ಹಿನ್ನೆಲೆ ಈಗ ಮೂತ್ರಕ್ಕೆ ಒಳಗೆ ಹೋಗುವ ಜನರು ಸಹ ಸಂಕಟ ಪಡುತ್ತಾ ಹೋಗುವಂತಾಗಿದೆ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರು ಮುತುವರ್ಜಿ ವಹಿಸಿ, ಸಾರ್ವಜನಿಕ ಮೂತ್ರಾಲಯದ ಸ್ವಚ್ಛತೆಗೆ ಮುಂದಾಗಬೇಕಿದೆ. ಹಾಗೂ ನಿರ್ವಹಣೆ ಸಹ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Kshetra Samachara
28/04/2022 12:04 pm