ಕುಂದಗೋಳ: ಕಳೆದ ಹಲವಾರು ದಿನಗಳಿಂದ ನಡೆದ ಹುಬ್ಬಳ್ಳಿ-ಲಕ್ಷ್ಮೇಶ್ವರ ಮಾರ್ಗ ಮಧ್ಯದ ಶಿರೂರು ಬ್ರಿಡ್ಜ್ ಕಾಮಗಾರಿಗೆ ನಾಳೆ ತಾರ್ಕಿಕ ಅಂತ್ಯ ಸಿಗಲಿದ್ದು ಲಘು ವಾಹನಗಳ ಓಡಾಟಕ್ಕೆ ಅವಕಾಶ ಸಿಗಲಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದ್ದಾರೆ.
ಕಳೆದ ಹಲವಾರು ದಿನಗಳ ಹಿಂದೆ ನೆಲಕ್ಕೆ ಅಪ್ಪಳಿಸಿದ್ದ ಶಿರೂರು ಬ್ರಿಡ್ಜ್ ಕಾಮಗಾರಿ ಮಾ.16 ರಂದು ಮುಗಿಯಬೇಕಿತ್ತು. ಆದರೆ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಲು ಹೆಚ್ಚಿನ ಸಮಯ ಪಡೆದಿತ್ತು. ಇಂದು ಶಾಸಕಿ ಕುಸುಮಾವತಿ ಶಿವಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶಿರೂರು ಬ್ರಿಡ್ಜ್ ಕಾಮಗಾರಿ ವೀಕ್ಷಣೆ ಮಾಡಿದ್ದು, ಭಾಗಶಃ ಕಾಮಗಾರಿ ಮುಕ್ತಾಯ ಕಂಡಿದ್ದು ನಾಳೆಯಿಂದ ಬ್ರಿಡ್ಜ್ ಮೇಲೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.
ಮತ್ತೊಮ್ಮೆ ಬ್ರಿಡ್ಜ್ ಕಾಮಗಾರಿ ಪರಿಶೀಲನೆ ನಡೆಸಿ ಎಂದಿನಂತೆ ಬಸ್ ಹಾಗೂ ಭಾರೀ ಗಾತ್ರದ ವಾಹನಗಳು ಲಾರಿ ಸಂಚಾರಕ್ಕೆ ಶಿರೂರು ಮುಕ್ತ ಅವಕಾಶ ಸಿಗಲಿದೆ.
Kshetra Samachara
11/04/2022 08:55 pm