ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಯಾರಿಗೂ ಹಣ ಕೊಡದೇ ಕೆಲ್ಸಾ ಮಾಡಿ - ಪ್ರಲ್ಹಾದ ಜೋಶಿ

ಕುಂದಗೋಳ: ಗ್ರಾಮಗಳ ಅಭಿವೃದ್ಧಿಗೆ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಕುಂದಗೋಳ ತಾಲೂಕಿನ ಹಳ್ಳಿ ಹಳ್ಳಿಗೆ ಸಂಪರ್ಕಿಸುವ ರಸ್ತೆ, ಶಾಲೆ ಅಭಿವೃದ್ಧಿ ಆಗ್ತಾ ಇವೆ. ಗುತ್ತಿಗೆದಾರರು ಯಾರಿಗೂ ಒಂದು ರೂಪಾಯಿ ಕೊಡದೇ ಚಲೋ ಕಾಮಗಾರಿ ಮಾಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅವರು ಕುಂದಗೋಳ ತಾಲೂಕಿನ ಯಲಿವಾಳದಿಂದ ಅರಳಿಕಟ್ಟಿಗೆ ಸಂಪರ್ಕ ಮಾಡುವ 5 ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ, ಹಂಚಿನಾಳದಲ್ಲಿ 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶಾಲಾ ಕೊಠಡಿ ಉದ್ಘಾಟನೆ, ಕಮಡೊಳ್ಳಿಯಲ್ಲಿ 62.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಾಲಾ ಕೊಠಡಿ ಉದ್ಘಾಟನೆ ಮಾಡಿ ಮಾತನಾಡಿ, ಕೇಂದ್ರ ದಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ರಾಜಿ ಇರದೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡ್ತಾ ಇದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೃಷಿ ಉತ್ಪನ್ನ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಬಿಜೆಪಿ ಮುಖಂಡ ಎಮ್.ಆರ್.ಪಾಟೀಲ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

04/03/2022 12:49 pm

Cinque Terre

16.82 K

Cinque Terre

1

ಸಂಬಂಧಿತ ಸುದ್ದಿ