ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಮಸ್ಯೆ ಬಗೆಹರಿಸಲು ಬಂದ ಸ್ಮಾರ್ಟ್ ಸಿಟಿ ಅಲ್ಲ: ಪ್ರಚಾರಕ್ಕಾಗಿ ಬಂದಿರುವ ಮಹತ್ವದ ಯೋಜನೆ

ಹುಬ್ಬಳ್ಳಿ: ಅದು ಬೆಂಗಳೂರು ಬಿಟ್ಟರೆ ಆ ಮಹಾನಗರ ರಾಜ್ಯದ ಎರಡನೇ ರಾಜಧಾನಿ ಅಂತಾ ಕರೆಸಿಕೊಳ್ಳುವ ನಗರ. ವೇಗವಾಗಿ ಬೆಳೆಯುತ್ತಿರುವ ಆ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಚಾರದಲ್ಲಿ ಇದೀಗ ಬಿಟ್ಟಿ ಪ್ರಚಾರದ ಗೀಳು ಹೆಚ್ಚಾಗಿದೆ. ಅಲ್ಲದೇ ಕಾಮಗಾರಿ ವಿಳಂಬದ ಬಗ್ಗೆ ಸಾರ್ವಜನಿಕ ಅಸಮಾಧಾನ ಕೂಡ ಹೊರ ಬಿದ್ದಿದೆ. ಏನದು ಬಿಟ್ಟಿ ಪ್ರಚಾರದ ಗೀಳು ಅಂತಾ ತೋರಿಸ್ತೀವಿ ಈ ಸ್ಟೋರಿ ನೋಡಿ.

ಹೌದು.. ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಚಾರದಲ್ಲಿ ಇದೀಗ ಪಾಲಿಕೆ ಸದಸ್ಯರಿಂದ ಬಿಟ್ಟಿ ಪ್ರಚಾರದ ಗೀಳು ಆರಂಭವಾಗಿದೆ. ಹೌದು ಕಳೆದ ಎರಡೂವರೆ ವರ್ಷದಿಂದ ಅಧಿಕಾರಿಗಳ ಹಿಡಿತದಲ್ಲಿಯೇ ಇದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಮೂರು ತಿಂಗಳು ಕಳೆದಿವೆ. 82 ವಾರ್ಡುಗಳಿಗೆ ನಡೆದ ಈ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಮೂರು ತಿಂಗಳು ಕಳೆದರೂ ಇನ್ನೂ ಪಾಲಿಕೆಯ ಜನಪ್ರತಿನಿಗಳಿಗೆ ಅಧಿಕಾರ ಹಸ್ತಾಂತರವಾಗಿಲ್ಲ. ಆದರೆ ಅವಳಿ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಚಾರದಲ್ಲಿ ಪಾಲಿಕೆಯ ಸದಸ್ಯರು ಕಾಮಗಾರಿಯ ಸ್ಥಳದಲ್ಲಿ ಬಿಟ್ಟಿ ಪೋಸ್ ಕೊಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳೋಕೆ ಶುರು ಮಾಡಿದ್ದಾರೆ.

ಅವಳಿ ನಗರದ ಬಹುತೇಕ ವಾರ್ಡ್ ಗಳಲ್ಲಿ ಈಗಾಗಲೇ ರಸ್ತೆ, ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳು ನಡೆಯುತ್ತಿದೆ. ಇತ್ತ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಆಯಾ ವಾರ್ಡ್ ಗಳ‌ ಸದಸ್ಯರು ನಿಂತು ಪೋಸ್ ಕೊಡೋ ಮೂಲಕ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಬಿಟ್ಟಿ ಪ್ರಚಾರ ಪಡೆದುಕೊಳ್ಳೋಕೆ ಮುಂದಾಗಿದ್ದಾರೆ. ಅಲ್ಲದೇ ಕಾಮಗಾರಿ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದ್ದು, ಜನರು ಸಮಸ್ಯೆಗಳ ಸುಳಿಯಲ್ಲಿಯೇ ಸಿಲುಕಿಕೊಂಡು ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.

Edited By : Nagesh Gaonkar
Kshetra Samachara

Kshetra Samachara

10/01/2022 05:40 pm

Cinque Terre

100.56 K

Cinque Terre

12

ಸಂಬಂಧಿತ ಸುದ್ದಿ