ಹುಬ್ಬಳ್ಳಿ: ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆದಿತ್ತು. ಬಿಜೆಪಿ ನಾಯಕರು ತಮ್ಮ ಪಕ್ಷದ ಬಾವುಟ ಹಾಗೂ ಪಕ್ಷದ ಚಿಹ್ನೆ ಇರುವ ಬಂಟಿಂಗ್ಸ್‌ಗಳನ್ನು ಇಡೀ ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲಿ ಕಟ್ಟಿ ರಾರಾಜಿಸುವಂತೆ ಮಾಡಿದ್ದರು. ಆದರೆ ಅದೇ ಬಾವುಟಗಳು ಈಗ ವಾಹನ ಸವಾರರ ಪ್ರಾಣ ತೆಗೆಯಲು ಸಿದ್ಧವಾಗಿವೆ.
ಹೌದು..ಹುಬ್ಬಳ್ಳಿಯಲ್ಲಿ ಬಹುತೇಕ ರಸ್ತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಾವುಟ ಹಾಗೂ ಬಂಟಿಂಗ್ಸ್ ಕಟ್ಟಿದ್ದರು. ಅದೇ ರೀತಿ ನಗರದ ಆಕ್ಸ್‌ಫರ್ಡ್ ಕಾಲೇಜು ಬಳಿ ಇರುವ ಬ್ರಿಡ್ಜ್ ಮೇಲೆ ಹಾಕಿರುವ ಬಾವುಟಗಳು ಈಗ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಕಟ್ಟಿರುವ ಬಂಟಿಂಗ್ಸ್ ಈಗ ಅರ್ಧ ಕೆಳಗೆ ಬಿದ್ದಿರುವ ಪರಿಣಾಮ, ಬೈಕ್ ಚಕ್ರಕ್ಕೆ ಸಿಲುಕಿ ಸವಾರರಿಗೆ ತೊಂದರೆ ಉಂಟು ಮಾಡುತ್ತಿದೆ.
ಕಾರ್ಯಕರ್ತರಿಗೆ ಬಂಟಿಂಗ್ಸ್ ಕಟ್ಟೋದಷ್ಟೇ ಗೊತ್ತು.ಕಾರ್ಯಕ್ರಮ ಮುಗಿದಾದ ಮೇಲೆ ಅದನ್ನೆಲ್ಲ ತೆರವುಗೊಳಿಸಬೇಕು ಅನ್ನೋದು ಗೊತ್ತಾಗೋದಿಲ್ವಾ? ಅಂತ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
03/01/2022 01:24 pm