ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಬ್ಯಾರೇಜಿನ ಸುಧಾರಣಾ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ಅಳ್ನಾವರ: ಪಟ್ಟಣದ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನ ಹತ್ತಿರ ಬ್ಯಾರೇಜಿನ ಸುಧಾರಣಾ ಭೂಮಿ ಪೂಜೆ ಶಾಸಕರಾದ ಸಿ.ಎಂ.ನಿಂಬಣ್ಣವರಿಂದ ನಡೆಯಿತು.

ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಹುಲಿಕೇರಿ ಇಂದಿರಮ್ಮನ ಕೆರೆ ಯ ತಡೆಗೋಡೆ ಸೇರಿದಂತೆ ಅಳ್ನಾವರ ಪಟ್ಟಣದ ಡೌಗಿ ನಾಲಾ,ಬೆನಚಿ ಸೇತುವೆ ಹೀಗೆ ಅನೇಕ ಸೇತುವೆಗಳು,ರಸ್ತೆಗಳು ಸಂಪೂರ್ಣ ನಾಶವಾಗಿದ್ದವು.

ಈ ಬ್ಯಾರೇಜಿನ ಅಕ್ಕ ಪಕ್ಕದ ಜಮೀನುಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿ ಸೇತುವೆ ಹಾಳಾಗುವುದಷ್ಟೇ ಅಲ್ಲದೆ,ಜಮೀನಿನ ಮಣ್ಣು ಸಹ ಕೊಚ್ಚಿಕೊಂಡು ಹೋಗಿ ಹೊಲಗಳಿಗೆ ನೀರು ನುಗ್ಗಿದೆ.ಇದರ ಪರಿಣಾಮವಾಗಿ ಬೆಳೆ ನಾಶ ವಾಗುವುದಲ್ಲದೆ,ಮಣ್ಣಿನ ಸವಕಳಿ ಕೂಡಾ ಉಂಟಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಬ್ಯಾರೇಜಿನ ಸುಧಾರಣೆಗಾಗಿ ಸಣ್ಣ ನೀರಾವರಿ ಇಲಾಖೆ ಇಂದ ಐವತ್ತೆಂಟು ಲಕ್ಷ ರೂ ಅನುದಾನ ಬಿಡುಗಡೆ ಯಾಗಿದ್ದು,ಇದರ ಭೂಮಿ ಪೂಜೆಯನ್ನ ಶಾಸಕರಾದ ಸಿ.ಎಂ.ನಿಂಬಣ್ಣವರ ನೆರವೇರಿಸಿದರು.

ಈ ಸುಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಯ ಉಪಾಧ್ಯಕ್ಷರಾದ ನದೀಮ ಕಾಂಟ್ರಾಕ್ಟರ್,ಬಿಜೆಪಿ ಕಾರ್ಯಕಾರ್ಯಣಿ ಸದಸ್ಯರಾದ ಪ್ರವೀಣ ಪವಾರ,ರಾಜು ಯಲಕಪಾಟಿ,ಫಯಿಮ್ ಕಾಂಟ್ರಾಕ್ಟರ್,ಇಂಜಿಯರ್ ಹಾಗೂ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

01/10/2021 02:55 pm

Cinque Terre

13.47 K

Cinque Terre

0

ಸಂಬಂಧಿತ ಸುದ್ದಿ