ಕಲಘಟಗಿ: ಕಾಂಗ್ರೆಸ್ ಸರಕಾರದ ಸಮಯದಲ್ಲಿ ತಾವೇ ಅನುದಾನ ಮಂಜೂರಿ ಮಾಡಿಸಿರುವ ನೂರು ಕೋಟಿ ವೆಚ್ಚದ ಕಾಳಿ ನದಿಯಿಂದ ಅಳ್ನವಾರಕ್ಕೆ ನೀರು ಪೂರೈಕೆ ಮಾಡುವ ಕಾಮಗಾರಿಯ ಪೈಪ ಲೈನ್ ಆಗಿಲ್ಲ ಹಾಗೂ ಕಲಘಟಗಿ ಹತ್ತಿರದ ೧೨೫ ಕೋಟಿ ವೆಚ್ಚದ ಬೇಡ್ತಿ ನಾಲಾದಿಂದ ಕೆರೆ ತುಂಬಿಸುವ ಕಾಮಗಾರಿ ಕಳೆದ ಸುಮಾರು ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಬೇಸರ ವ್ಯಕ್ತಪಡಿಸಿದರು.
ಅವರು ಕಲಘಟಗಿ ತಾಲೂಕಿನ ಮಡ್ಕಿಹೊನ್ನಳ್ಳಿಯ ಅಮೃತ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ಕಾಳಿ ಹಾಗೂ ಬೇಡ್ತಿ ನಾಲಾ ಕಾಮಗಾರಿಗಳನ್ನು
ಶಾಸಕರಾದ ಸಿ ಎಂ ನಿಂಬಣ್ಣವರ ಪೂರ್ಣಗೊಳಿಸಲು ಪ್ರಯತ್ನಿಸಲಿ ಇದರಿಂದ ಸಾವಿರಾರು ರೈತರಿಗೆ ಬೇಸಿಗೆ ಸಮಯದಲ್ಲಿ ಅನುಕೂಲವಾಗಲಿದೆ ಹಾಗೂ ಅಳ್ನವಾರ ಹುಲಿಕೆರೆ ಕಾಮಗಾರಿ ಶೀಘ್ರ ಪ್ರಾರಂಭಿಸಿಸಲು ಸರಕಾರ ಕ್ರಮಕೈಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಮುರಳ್ಳಿ,ಅಳ್ನವಾರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ,ಎಸ್ ಆರ್ ಪಾಟೀಲ,ಇಸ್ಮಾಯಿಲ್ ತಮಟಗಾರ ಉಪಸ್ಥಿತರಿದ್ದರು.
Kshetra Samachara
13/09/2021 05:18 pm