ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೊಮ್ಮಾಯಿ ನೇತೃತ್ವದಲ್ಲಿ ಆರಂಭವಾದ ಹೋರಾಟಕ್ಕೆ ಸಿಗಲಿದೆಯಾ ಜಯ: ಅಧಿವೇಶನತ್ತ ಉ.ಕ ಜನರ ಚಿತ್ತ.!

ಹುಬ್ಬಳ್ಳಿ: ಅದು ಸುಮಾರು ನಾಲ್ಕು ದಶಕದ ಹೋರಾಟ. ಈ ಹೋರಾಟ ಉತ್ತರ ಕರ್ನಾಟಕದ ಪ್ರತಿಷ್ಠೆಯನ್ನು ಪ್ರದರ್ಶಿಸುವ ಹೋರಾಟ. ಈ ಹೋರಾಟಕ್ಕೆ ಈಗಾಗಲೇ ನ್ಯಾಯಾಧೀಕರಣ ತೀರ್ಪು ಕೂಡ ಬಂದಿದ್ದು, ಮುಂದಿನ ಬೆಳವಣಿಗೆ ಮಾತ್ರ ಇಂದು ನಡೆಯುವ ಅಧಿವೇಶನದತ್ತ ದೃಷ್ಟಿ ನೆಟ್ಟಿದೆ. ಹಾಗಿದ್ದರೇ ಏನಿದು ಹೋರಾಟ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..

ಮಲಪ್ರಭೆಗೆ ಮಹದಾಯಿ ನೀರು ಹರಿಸುವ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಪುನಃ ಆರಂಭಿಸುವ ಕುರಿತು ವಿಧಾನಸಭೆ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಹದಾಯಿ ಹೋರಾಟ ಸಮನ್ವಯ ಸಮಿತಿ ಆಗ್ರಹಿಸಿದೆ. ಹೌದು.. ನ್ಯಾಯಾಧಿಕರಣ ತೀರ್ಪು ನೀಡಿ 13.5 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ಹಂಚಿಕೆ ಮಾಡಿದೆ, ಈ ಹಿಂದಿನ ಸರ್ಕಾರಗಳು ಮುಂದುವರಿದ ಕಾಮಗಾರಿಗಾಗಿ ಹಣ ಕಾಯ್ದಿರಿಸಲಾಗಿದೆ ಎಂದು ಹೇಳಿವೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದು, ಅಗತ್ಯ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಪ್ರಾರಂಭಿಸಿ ಕೂಡಲೆ ನೀರು ಕಾಮಗಾರಿ ಹರಿಸಲು ಮುಂದಾಗಬೇಕೆಂದು ಸಮಿತಿ ಆಗ್ರಹಿಸಿದೆ. ಇನ್ನೂ ಈ ಭಾಗದವರೇ ಸಿಎಂ ಆಗಿದ್ದು, ಇಂದಿನಿಂದ ನಡೆಯುವ ಅಧಿವೇಶನದಲ್ಲಿ ಯಾವ ನಿರ್ಧಾರಕ್ಕೆ ಹಸಿರು ನಿಶಾನೆ ತೋರುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಹೋರಾಟವನ್ನು ಸ್ವತಃ ಸಂಘಟಿಸಿ ಮಹದಾಯಿ ನೀರು ತಂದೇ ತೀರುತ್ತೇವೆಂದು ರಕ್ತದಲ್ಲಿ ಪತ್ರ ಬರೆದು ಕೊಟ್ಟ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿ, ಜಲಸಂಪನ್ಮೂಲ ಸಚಿವರಾಗಿದ್ದರೂ ಸಮಸ್ಯೆ ಪರಿಹಾರ ಕಂಡಿಲ್ಲ. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ. ಶಂಕರ ಪಾಟೀಲ ಮುನೇನಕೊಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹೀಗಾಗಿ, ಯಾವುದೇ ನೆಪಗಳನ್ನು ಹೇಳದ ಪ್ರಸ್ತುತ ಅಧಿವೇಶನದಲ್ಲಿಯೇ ತೀರ್ಮಾನ ಮಾಡುವುದರೊಂದಿಗೆ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಸಾಕಾರಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಪ್ರಾರಂಭವಾಗಿದ್ದ ಹೋರಾಟ ಅವರ ನಾಯಕತ್ವದಲ್ಲಿಯೇ ಅಂತಿಮ ಘಟ್ಟ ತಲುಪಲಿದೆ ಎಂಬುವುದು ಸಾರ್ವಜನಿಕರ ಆಶಯವಾಗಿದೆ. ಇನ್ನೂ ಪ್ರಾರಂಭದಿಂದಲೇ ಮಹದಾಯಿ ಹೋರಾಟದ ಇಂಚಿಂಚೂ ತಿಳಿದುಕೊಂಡಿರುವ ಬೊಮ್ಮಾಯಿಯವರು ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಎಷ್ಟು ಮಹತ್ವವನ್ನು ನೀಡುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

Edited By : Manjunath H D
Kshetra Samachara

Kshetra Samachara

13/09/2021 11:54 am

Cinque Terre

47.57 K

Cinque Terre

2

ಸಂಬಂಧಿತ ಸುದ್ದಿ