ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿವೇಶನಕ್ಕಾಗಿ ಹಿರೇಹರಕುಣಿ ಗ್ರಾಪಂ ಮುಂದೆ ಧರಣಿ

ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ತಮಗೆ ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ಮನೆ ಹಕ್ಕು ಪತ್ರ ವಿತರಣೆ ಮಾಡಿದರೂ ನಿವೇಶನ ಕೊಡುತ್ತಿಲ್ಲ ಎಂದು ಫಲಾನುಭವಿಗಳು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಿನ್ನೆಯ ದಿನ ಬುಧವಾರ ನಡೆದಿದೆ.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಟ್ಟಿಮನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಹಿರೇಹರಕುಣಿ ಗ್ರಾಮದ ಗೋಮಾಳ ಜಾಗೆಯಲ್ಲಿ ಕಳೆದ 5 ವರ್ಷದ ಹಿಂದೆ 165 ಬಡ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು, ಇದರಲ್ಲಿ 45 ಜನ ಕಡುಬಡವರನ್ನು ಗುರುತಿಸಿ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿತ್ತು, ಉಳಿದ ಹತ್ತು ಜನ ಬಡವರಿಗೆ ನಿವೇಶನ ಹಂಚಿಕೆ ಮಾಡಿಲ್ಲ ಹೀಗಾಗಿ ಆ ಫಲಾನುಭವಿಗಳಿಗೊಂದಿಗೆ ಧರಣಿ ಆರಂಭಿಸಿದ್ದಾಗಿ ತಿಳಿಸಿದರು.

ಇನ್ನೊಂದು ವಾರದೊಳಗಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಕೊಡುವುದಾಗಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ ಕುರಿಯವರ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಕೈ ಬಿಡಲಾಗಿದೆ. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಮಹಾಶೆಟ್ಟಿ, ಪ್ರಕಾಶ್ ಬಡಿಗೇರ್, ನಿಂಗಪ್ಪ, ಈರಮ್ಮ ಬಡಿಗೇರ್, ಸುರೇಶ್ ಬಡಿಗೇರ್ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

02/09/2021 11:25 am

Cinque Terre

23.85 K

Cinque Terre

1

ಸಂಬಂಧಿತ ಸುದ್ದಿ