ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಾದಾಯಿ ಯೋಜನೆ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ! ಸಚಿವ ಮುನೇನಕೊಪ್ಪ ಭರವಸೆ

ಹುಬ್ಬಳ್ಳಿ: ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಿಬ್ಯುನಲ್ ನಲ್ಲಿ 4 ಟಿಎಂಸಿ ಕುಡಿಯುವ ನೀರು ಕೊಡುವಂತೆ ಆದೇಶ ಆಗಿದೆ. ಸಣ್ಣ ಪುಟ್ಟ ತೊಡಕುಗಳನ್ನ ಬಗೆಹರಿಸಿ ಯೋಜನೆಯನ್ನ ಜಾರಿ ಮಾಡುತ್ತೇವೆ. ಈ ಬಗ್ಗೆ ಗೊಂದಲಗಳು ಆಗಬಾರದು 330 ಹಳ್ಳಿಗಳಿಗೂ ನೀರು ಕೊಡುವ ಯೋಜನೆ ಮಾಡುತ್ತಿದ್ದೇವೆ. ಕಳಸಾ ಬಂಡೂರಿ ಗೊಂದಲದ ಹೇಳಿಕೆ ನೀಡುವುದು ಬೇಡ.‌

ಮೂರು ರಾಜ್ಯಗಳ ಸಹಕಾರ ಈ ವಿಚಾರದಲ್ಲಿ ಬೇಕಾಗುತ್ತದೆ ಎಂದು ನೂತನ ಕೈಮಗ್ಗ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಭವನದಲ್ಲಿಂದು ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇನ್ನು ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳದ ಡ್ರೋನ್ ಸರ್ವೇ ಆಗಿದೆ. 60 ದಿನಗಳಲ್ಲಿ ಜನರಿಗೆ ಸಿಹಿ ಸುದ್ದಿ ನೀಡುತ್ತೇನೆ. ಯಾವ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದರು.

ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರಗಳ ಯೋಜನರಗಳನ್ನು ಭ್ರಷ್ಟಾಚಾರ ರಹಿತವಾಗಿ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಸಚಿವನಾಗಿ ನಿನ್ನೆಯಷ್ಟೇ ಸ್ವ ಜಿಲ್ಲೆಗೆ ಬಂದು ಕೋವಿಡ್ 3 ನೇ ಅಲೆ ನಿಯಂತ್ರಣ ಹಾಗೂ ನೆರೆ ಹಾವಳಿ ಕುರಿತು ಧಾರವಾಡದಲ್ಲಿ ಮಹತ್ವದ ಸಭೆ ನಡೆಸಿದ್ದೇನೆ. ಮುಖ್ಯಮಂತ್ರಿಗಳು ಹಾಗೂ ಪಕ್ಷ ವರಿಷ್ಠರು ಮಂತ್ರಿ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಅದನ್ನು ಯಶಸ್ವಿಯಾಗಿ ಸದ್ಬಳಕೆ ಮಾಡಿಕೊಂಡು ನಿಭಾಯಿಸಲಾಗುವದು ಎಂದು ತಿಳಿಸಿದರು.

ಕೊರೊನಾ 3 ನೇ ಅಲೆ ತಡೆಗೆ ಸರ್ವ ಪ್ರಯತ್ನ ಮಾಡಲಾಗುವದು , ಆಕ್ಸಿಜನ್ ಕೊರತೆ ಹಾಗೂ ವೆಂಟಿಲೇಟರ್ ಕೊರತೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುವದು, ಈಗಾಗಲೇ ಅಧಿಕಾರಿಗಳ ಜೊತೆಗೆ 750 ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೇನೆ. ಕಿಮ್ಸ್ , ಸಿವಿಲ್ ಆಸ್ಪತ್ರೆ ಒತ್ತಡ ಜಾಸ್ತಿ ಆಗದಂತೆ ನೋಡಿಕೊಳ್ಳಲಾಗುವದು ಎಂದರು.

Edited By : Shivu K
Kshetra Samachara

Kshetra Samachara

08/08/2021 04:41 pm

Cinque Terre

89.09 K

Cinque Terre

4

ಸಂಬಂಧಿತ ಸುದ್ದಿ