ವರದಿ: ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ- ಇತ್ತ ಪಾಲಿಕೆಯಲ್ಲಿ ಕಾರ್ಪೊರೇಟರ್ ಇಲ್ಲಾ, ಅತ್ತ ವಾರ್ಡ್‌ಗಳಲ್ಲಿ ಅಧಿಕಾರಿಗಳಿಲ್ಲಾ. ಆದ್ರೆ ಈ ವಾರ್ಡ್‌ನ ಜನರ ಮಾತ್ರ ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.
ಹೌದು,,, ಹೀಗೆ ಮಹಿಳೆಯರು ಸೇರಿಕೊಂಡು ಪಾಲಿಕೆ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ, ದಿಕ್ಕಾರ ಹಾಕುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಹಳೆ ವಾರ್ಡ್ 40 ಹೊಸ ವಾರ್ಡ್ 52 ರ ಶ್ರೀಕೇತೇಶ್ವರ ಕಾಲೋನಿಯಲ್ಲಿ. ಇಲ್ಲಿ ಸುಮಾರು ನಾಲ್ಕೈದು ವರ್ಷದಿಂದ ರಸ್ತೆ, ಗಟರ್ ಇಲ್ಲದೆ ಪರದಾಡುತ್ತಿದ್ದಾರೆ. ಬೇಸಿಗೆಯಲ್ಲಿ ಧೂಳಿನ ಕಾಟವಾದರೆ, ಇತ್ತ ಮಳೆಗಾಲದಲ್ಲಿ ಕೆಸರಿನಲ್ಲಿ ಇವರ ಜೀವನ. ಈ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟೋ ಸಾರಿ ಮನವಿ ಕೊಟ್ಟರು ಸರ್ ಯಾರು ಕ್ಯಾರೆ ಎನ್ನುತ್ತಿಲ್ಲ ಎಂದು, ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಮಸ್ಯೆ ಬಗೆ ಹರಿಯದಿದ್ದರೆ, ಎಲ್ಲ ಮಹಿಳೆಯರು ಸೇರಿಕೊಂಡು ಪಾಲಿಕೆ ಮುಂದೆ ಧರಣಿ ಮಾಡುತ್ತೆವೆಂದು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Kshetra Samachara
05/08/2021 07:51 pm