ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೊರೊನಾ ಲಾಕ್ ಡೌನ್ ನಿಂದ ಸಾರಿಗೆ ಸಂಸ್ಥೆಗೆ 3700 ಕೋಟಿ ನಷ್ಟ:ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಕಲಘಟಗಿ:ಕೊರೊನಾ ಲಾಕ್ ಡೌನ್ ನಿಂದಾಗಿ ಸಾರಿಗೆ ಸಂಸ್ಥೆಗೆ ನಾಲ್ಕು ವಿಭಾಗದಿಂದ 3700 ಕೋಟಿ ನಷ್ಟ ಸಂಭವಿಸಿದೆ‌.ಕಲಘಟಗಿ ನೂತನ ಬಸ್ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ ಅವರು,ಸಂಸ್ಥೆಯ 1.30 ಲಕ್ಷ ನೌಕರಿಗೆ ತೊಂದರೆಯಾಗಬಾರದು ಎಂದು,ಸರ್ಕಾರದಿಂದ ಸಾರಿಗೆ ನೌಕರರ ಸಂಬಳ ಭರಣೆಗೆ 1746 ಕೋಟಿ ನೆರವು‌ ನೀಡಲಾಗಿದೆ. ನೌಕರರ ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ದವಾಗಿದೆ ಎಂದರು.

ಲಾಕ್ ಡೌನ್ ನಂತರ ಸಾರಿಗೆ ಸಂಚಾರ ಪುನಃ ಪ್ರಾರಂಭಿಸಲಾಗಿದೆ‌‌. ಪ್ರತಿದಿನ 1 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಲಾಕ್ ಡೌನ್ ಪ್ರಾರಂಭಕ್ಕೂ ಮುನ್ನ 4.20 ಕೋಟಿ ಜನರು ಪ್ರಯಾಣಿಸುತ್ತಿದ್ದರು. ಸಾರಿಗೆ ಆದಾಯ ಕುಂಠಿತವಾಗಿದೆ.ಕೇಂದ್ರ ಸರ್ಕಾರ 350 ಎಲೆಕ್ಟ್ರಿಕಲ್ ಬಸ್ ಖರೀದಿಗೆ ಪ್ರತಿ ಬಸ್ ಗೆ 55 ಲಕ್ಷ ರೂಪಾಯಿ ಸಬ್ಸಿಡಿ ನೀಡಿದ್ದು, ಸಂಸ್ಥೆಯ 2000 ನಿಷ್ಕ್ರಿಯ ಹಳೆ ಬಸ್ ಗಳನ್ನು ಗುಜರಿಯವರಿಗೆ ಹರಾಜು ನೀಡದೆ,ಸಾರ್ವಜನಿಕ ಸ್ಥಳಗಳಲ್ಲಿ ಶಾಲೆಗಳಲ್ಲಿ,ಬಸ್ ಗಳನ್ನು ಸುಸಜ್ಜಿತ ಶೌಚಾಲಯ, ಸ್ನಾನ ಗೃಹಗಳನ್ನು ನಿರ್ಮಿಸಲಾಗುವುದು‌. ಇದರಿಂದ ಹಣದ ಉಳಿತಾಯವಾಗಲಿದೆ. ವಾ.ಕ.ರ.ಸಾ.ಸಂಸ್ಥೆ ನಿವೃತ್ತಿ ನೌಕರರ ಉಪದಾನ ನಗದೀಕರಣ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಅಲ್ಪಾವಧಿ ಸಾಲ ಪಡೆಯುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದಲ್ಲಿ ಅಪಘಾತಗಳಿಂದ ಮೃತರಾಗುವವರ ಸಂಖ್ಯೆ ಹೆಚ್ಚಿದೆ.ಸುರಕ್ಷಿತ ಪ್ರಯಾಣ ಕೇಂದ್ರ ಸರ್ಕಾರದ ಗುರಿಯಾಗಿದೆ.ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ 80 ಸಾವಿರ ಕೋಟಿ ರೂಪಾಯಿಗಳ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 1.25 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಲಘಟಗಿ ನಗರದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ಎನ್.ಪಿ.ಸಿ.ಐ.ಎಲ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ 5 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಅವಳಿ ನಗರದಲ್ಲಿ ಬೇಂದ್ರೆ ಬಸ್ ಗಳ ಹಾವಳಿ ಹೆಚ್ಚಾಗಿರುವುದರಿಂದ ಸಾರಿಗೆ ಸಂಸ್ಥೆಗೆ ಪ್ರತಿ ತಿಂಗಳು 20 ಕೋಟಿ ರೂ. ನಷ್ಟವಾಗುತ್ತಿದೆ. ಬಿ.ಆರ್.ಟಿ.ಎಸ್. ಯೋಜನೆ ಜಾರಿಗೆ ತಂದು ಕೂಡ ಜನರು ಬವಣೆ ಅನುಭವಿಸುಂತೆ ಆಗಿದೆ.ಮಿಶ್ರ ಪಥದಲ್ಲಿ ಬೇಂದ್ರೆ ಮತ್ತು ವಾಯುವ್ಯ ರಸ್ತೆ ಸಾರಿಗೆಯ ಬಸ್ ಗಳು ಸಂಚರಿಸುವುದರಿಂದ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ.ರಾಜ್ಯ ಸರ್ಕಾರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮೇಲಿನ ಕರ ಸಂಗ್ರಹಣೆ ವಿನಾಯತಿ ನೀಡಿದರೆ.ಸಂಸ್ಥೆಯ ನಷ್ಟ ಸರಿದೂಗಿಸಬಹದು.

ವಾಯುವ್ಯ ಕಾರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವ್ಹಿ.ಎಸ್ ಪಾಟೀಲ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಕೆ. ಸವದಿ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಈಶ್ವರಗೌಡ ಚಿಕ್ಕನಗೌಡ್ರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಶಾಸಕರಾದ ಸಿ.ಎಮ್ ನಿಂಬಣ್ಣವರ,ಪ್ರದೀಪ ಶೆಟ್ಟರ, ತಾ.ಪಂ. ಅಧ್ಯಕ್ಷೆ ಸುನಿತಾ ಲಕ್ಷಣ ಮ್ಯಾಗಿನಮನಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬಸಯ್ಯ ಹೆಬ್ಬಳ್ಳಿಮಠ, ಸಾರಿಗೆ ಸಂಸ್ಥೆ ನಿರ್ದೇಶಕರುಗಳಾದ ಅಶೋಕ ಸಿ. ಮಳಗಿ, ಸಂತೋಷಕುಮಾರ ಆಯ್ ಪಾಟೀಲ,ಪ್ರಕಾಶ ಶ್ರೀಪಾದ ಗೋಡಬೋಲೆ, ಸಿದ್ಧಲಿಂಗೇಶ್ವರ ಮಠದ, ಶರಣ್ ಪಾಟೀಲ, ಸದಾಶಿವ ತೇಲಿ, ವಾ.ಕ‌.ರ.ಸಾ.ಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ, ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ, ಮುಖ್ಯ ಕಾಮಗಾರಿ ಅಭಿಯಂತರ ಟಿ.ಕೆ.ಪಾಲನೇತ್ರ ನಾಯಕ ಸೇರಿದಂತೆ ಉಪಸ್ಥರಿದ್ದರು.

Edited By : Manjunath H D
Kshetra Samachara

Kshetra Samachara

24/01/2021 11:13 am

Cinque Terre

36.24 K

Cinque Terre

2

ಸಂಬಂಧಿತ ಸುದ್ದಿ