ಹುಬ್ಬಳ್ಳಿ- ಹುಬ್ಬಳ್ಳಿ ಧಾರವಾಡ ಮಹಾನಗರವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ತಯಾರಾಗುತ್ತಿದೆ. ಅದರಂತೆ ನಗರದ ಪ್ರಮುಖ ಬೀದಿಗಳ ಮೇಲೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರನ್ನು, ತೆರುವು ಮಾಡಿಸುವ ಕಾರ್ಯಾಚರಣೆ ಮಹಾನಗರ ಪಾಲಿಕೆಯಿಂದ ನಡಿಸುತ್ತಿದ್ದನ್ನು ಖಂಡಿಸಿ, ನೂರಾರು ಬೀದಿ ಬದಿ ವ್ಯಾಪಾರಸ್ಥರು ನಗರದ ದುರ್ಗದಬೈಲ್ ಸರ್ಕಲ್ ದಲ್ಲಿ ಪಾಲಿಕೆ ವಿರುದ್ಧ ಘೋಷಣೆ ಹಾಕುತ್ತ ಪ್ರತಿಭಟನೆ ಮಾಡುತ್ತಿದ್ದಾರೆ..
ನಗರದ ದುರ್ಗದ ಬೈಲ್ ಸೇರಿದಂತೆ ಪ್ರಮುಖ ನಗರಗಳ ಪುಟ್ ಪಾತ್ ಮೇಲೆ ಹಚ್ಚಿದ್ದ ಅಂಗಡಿ ಮುಗ್ಗಟ್ಟುಗಳನ್ನು ತೆರುವು ಮಾಡಲಾಗುತ್ತಿದೆ. ಆದರೆ ಇದಕ್ಕೆ ಬೀದಿ ಬದಿ ವ್ಯಾಪಾಸ್ಥರು ವಿರೋಧ ವ್ಯಕ್ತ ಪಡಿಸುತ್ತಿದ್ದು, ನಮಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೆ ನೋಟಿಸ್ ನೀಡದೆ. ಏಕಾಏಕಿ ಜಾಗಾ ಖಾಲಿ ಮಾಡಲು ಹೇಳುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಾಸ್ಥರಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು....
Kshetra Samachara
04/01/2021 10:02 pm