ಹುಬ್ಬಳ್ಳಿ: ದೇಶಪಾಂಡೆನಗರ ಹಾಗೂ ಭವಾನಿನಗರ ಮಧ್ಯೆ ಸಂಪರ್ಕ ಕಲ್ಪಿಸುವ ರೇಲ್ವೆ ಕೆಳಸೇತುವೆಯಲ್ಲಿ ಕಾಮಗಾರಿ ನಡೆದಿರುವ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಮಣ್ಣು ಕುಸಿದಿದೆ.ಇದರಿಂದ ಸಚಿವರಿಗೇ ಆಗಲಿ ಯಾರಿಗೂ ಏನು ಆಗಿಲ್ಲ ಭಯಪಡುವ ಅಗತ್ಯವಿಲ್ಲ. ಕಾಮಗಾರಿ ನಡೆಸುವ ವೇಳೆ ನಾವು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಿರ್ಮಾಣ ಕಾರ್ಯ ಮಾಡುತ್ತಿದ್ದೇವೆ ಎಂದು ಸ್ವರ್ಣಾ ಗ್ರೂಪ್ ಮಾಲೀಕರಾದ ವಿ.ಎಸ್.ವಿ ಪ್ರಸಾದ ಅವರು ಇಂದು ನಡೆದ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ವಿವರಣೆ ನೀಡಿದ ಅವರು, ರೈಲ್ವೆ ಕೆಳಸೇತುವೆ ಕಾಮಗಾರಿ ನಡೆದಿದ್ದು, ಹಿನ್ನೆಲೆಯಲ್ಲಿ ಮಣ್ಣನ್ನು ಹಾಕಲಾಗಿದೆ. ಅಲ್ಲದೇ ಸಚಿವರಾದ ಜಗದೀಶ್ ಶೆಟ್ಟರ್ ವೀಕ್ಷಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಕೆಲಸವನ್ನು ಇಂದು ಬಂದ್ ಮಾಡಲಾಗಿತ್ತು.ಆದ್ದರಿಂದ ಹಾಕಿದ ಮಣ್ಣು ಕೆಳಗೆ ಸರಿದಿದೆ ಅಷ್ಟೇ. ಇದರಿಂದ ಸಚಿವರಿಗಾಗಲಿ ಇನ್ನಾರಿಗೇ ಆಗಲಿ ತೊಂದರೆಯಾಗಿಲ್ಲ..
Kshetra Samachara
02/01/2021 09:47 pm