ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆಗುಂಡಿಗೆ ರಂಗೋಲಿ ಹಾಕಿ ಶೆಟ್ಟರ್ ಫೋಟೋ ನೆಟ್ಟ ಸ್ಥಳೀಯ ನಿವಾಸಿಗಳು

ಹುಬ್ಬಳ್ಳಿ: ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ನಗರದ ವಿದ್ಯಾವನ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಅವರ ಭಾವಚಿತ್ರವನ್ನು ರಸ್ತೆಯ ಗುಂಡಿಯಲ್ಲಿ ನೆಟ್ಟು ವಿನೂತನ ಪ್ರತಿಭಟನೆ ನಡೆಸಿದರು.

ಮಳೆಯಿಂದ ರಸ್ತೆಗಳು ಹಾಳಾಗಿ ಹೋಗಿವೆ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ಜನರು ಓಡಾಡಲು ಆಗದ ಸ್ಥಿತಿ ಇದೆ. ಹೀಗಾಗಿ ರಸ್ತೆ ದುರಸ್ತಿ ಹಾಗೂ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ರಸ್ತೆ ಗುಂಡಿಗೆ ರಂಗೋಲಿ ಹಾಕಿ ಹಾಗೂ ತಿಪ್ಪೆಯಲ್ಲಿ ಜಗದೀಶ್ ಶೆಟ್ಟರ್ ಅವರ ಫೋಟೋ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ‌ ಕೂಡಲೇ ರಸ್ತೆ ದುರಸ್ತಿ ಹಾಗೂ ಕಸ ನಿರ್ವಹಣೆ ‌ಮಾಡುವಂತೆ ಸ್ಥಳಿಯರು ಗಮನ ಸೆಳೆದರು.

Edited By :
Kshetra Samachara

Kshetra Samachara

27/09/2020 01:06 pm

Cinque Terre

42.39 K

Cinque Terre

54

ಸಂಬಂಧಿತ ಸುದ್ದಿ