ಅಳ್ನಾವರ: ಅಳ್ನಾವರ ಪಟ್ಟಣದಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ ಬೀದಿ ಬದಿ ವ್ಯಾಪಾರಸ್ಥರಿಗೆ ಕಂಟಕವಾಗಿ ಪರಿಣಮಿಸಿದೆ. ಫುಟ್ ಪಾತ್ ತೆರವು ಕಾರ್ಯಚರಣೆಗೂ ಮೊದಲೇ ಬೀದಿ ಬದಿ ವ್ಯಾಪಾರಸ್ಥರಿಗೆ ಮೊದಲೇ ಹೇಳುವುದಾಗಲಿ,ವ್ಯಾಪಾರಕ್ಕಾಗಿ ಪರ್ಯಾಯ ವ್ಯವಸ್ಥೆಯಾಗಲೀ ಮಾಡದೆ ಏಕಾಏಕಿ ತೆರವುಗೊಳಿಸಿದ್ರಿಂದ ಬೀದಿ ಬದಿ ವ್ಯಾಪಾರಿಗಳು ನಿಜಕ್ಕೂ ಬೀದಿಗೆ ಬಂದಿದ್ದಾರೆ.
ಇಲ್ಲಿನ ಆಜಾದ್ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಮಾಡಲು, ಪಟ್ಟಣ ಪಂಚಾಯಿತಿಯವರು ಮುಂದಾದಾಗ ವ್ಯಾಪಾರಿಗಳು ತಕರಾರು ಮಾಡಿದರು.ನಮಗೆ ವ್ಯಾಪಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿದ ನಂತರ ನಮ್ಮನ್ನು ತೆರವುಗೊಳಿಸಿ ಎಂದರು. ಇದಕ್ಕೆ ಕ್ಯಾರೆ ಎನ್ನದ ಪಾಲಿಕೆಯವರು ಆಜಾದ್ ರಸ್ತೆಯ ಒಂದು ಬದಿ ಅಂಗಡಿಗಳನ್ನು ತೆರವುಗೊಳಿಸಿದರು. ಇನ್ನೊಂದು ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿಲ್ಲ. ಕಾರಣ ಕೇಳಿದರೆ ನಮ್ಮಲ್ಲಿ ಕಾರ್ಮಿಕರ ಕೊರತೆ ಇದೆ. ಗಣೇಶ ಹಬ್ಬ ಮುಗಿದ ನಂತರ ಅವರನ್ನು ತೆರವುಗೊಳಿಸಲಾಗುವುದು ಎನ್ನುತ್ತಿದ್ದಾರೆ.
ಇಲ್ಲಿ ವಿಪರ್ಯಾಸವೆಂದರೆ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿ, ನಂತರ ಅವರನ್ನು ತೆರವುಗೊಳಿಸಬೇಕಿತ್ತು. ಪಾಲಿಕೆಯ ಈ ತರಾತುರಿ ನಿರ್ಧಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ವ್ಯಾಪಾರಸ್ಥರಿಗೆ ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡುತ್ತಾರಾ ಕಾದು ನೋಡಬೇಕಿದೆ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್,ಅಳ್ನಾವರ
Kshetra Samachara
26/08/2022 01:25 pm