ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಧಿಕಾರಿಗಳ ನಿರ್ಲಕ್ಷಕ್ಕೆ ರಸ್ತೆ ಅತಿಕ್ರಮಣ, ಹೇಳೋರಿಲ್ಲ ಕೇಳೋರಿಲ್ಲ

ನವಲಗುಂದ : ಇಕ್ಕಟ್ಟಾದ ರಸ್ತೆ, ದ್ವಿಚಕ್ರ ವಾಹನ ಹೊರತು ಪಡಿಸಿ ಯಾವುದೇ ವಾಹನ ಸಂಚಾರಕ್ಕೂ ಸ್ಥಳವಿಲ್ಲ. ಇಂತಹ ರಸ್ತೆಯಲ್ಲಿ ಅನಧಿಕೃತವಾಗಿ ಕಟ್ಟಿದ ಗೋಡೆಗಳನ್ನು ಕಟ್ಟಲಾಗಿದೆ.

ಇದೆಲ್ಲಾ ದೃಶ್ಯಗಳು ಕಂಡು ಬಂದದ್ದು, ನವಲಗುಂದ ಪಟ್ಟಣದ ಕಳ್ಳಿಮಠ ಓಣಿಯ ವಾರ್ಡ್ ನಂಬರ್ 6 ರಲ್ಲಿ. ಈ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ

ಎಸ್... ಕಳೆದ ಸುಮಾರು ಏಳೆಂಟು ವರ್ಷಗಳಿಂದ ಇಲ್ಲಿನ ಸಾರ್ವಜನಿಕರು ಇಂತಹದ್ದೇ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಮುಂದುವರೆದಿದೆ. ಯಾಕಂದ್ರೆ ಈ ಸಮಸ್ಯೆ ಕೇಳಲು ಅಧಿಕಾರಿಗಳು ಇದ್ದು ಇಲ್ಲದಂತಾಗಿದ್ದಾರೆ. ಕೆಲವು ಸ್ಥಳೀಯರು ಪುರಸಭೆ ರಸ್ತೆಯಲ್ಲಿ ತಮಗೆ ಬೆಕ್ಕಾದ ರೀತಿ ಶೌಚಾಲಯ, ಟ್ಯಾಂಕ್ ಸೇರಿದಂತೆ ರಸ್ತೆಯನ್ನು ಬಳಸಿಕೊಂಡಿದ್ದಾರೆ. ಇಲ್ಲಿ ಸಾವು ಸಂಭವಿಸಿದರೂ ಸಹ ವಾಹನ ಒಳ ಬರಲಾಗದು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕೆಲವು ಬಾರಿ ಪುರಸಭೆ ಅಧಿಕಾರಿಗಳು ಭೇಟಿ ನೀಡಿದರೂ ಯಾವ ಕೆಲಸ ಆಗಿಲ್ವಂತೆ, ಇನ್ನು 6 ನೇ ವಾರ್ಡ್ ಪುರಸಭೆಯ ಅಧ್ಯಕ್ಷ ಅಪ್ಪಣ್ಣ ಹಳ್ಳದ ಅವರದ್ದೇ ಎನ್ನುವುದು ಇನ್ನೊಂದು ದುರಂತ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ರೂ ಅವರೂ ಸಹ ಸ್ಪಂದಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.

ರಸ್ತೆ ಅತಿಕ್ರಮಣ ಮಾಡಿದವರ ಮೇಲೆ ಇದುವರೆಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷತನ ಹಾಗೂ ಈ ವಾರ್ಡಿನ ಪುರಸಭೆಯ ಸದಸ್ಯರ ನಿಷ್ಕಾಳಜಿ ಎದ್ದು ಕಾಣುತ್ತಿದೆ ಎನ್ನುವ ಆರೋಪ ಸ್ಥಳೀಯರಲ್ಲಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Somashekar
Kshetra Samachara

Kshetra Samachara

28/07/2022 03:54 pm

Cinque Terre

42.91 K

Cinque Terre

3

ಸಂಬಂಧಿತ ಸುದ್ದಿ