ಕುಂದಗೋಳ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಚರಂಡಿ ಸ್ವಚ್ಚಗೊಳಿಸಿದ್ರೂ ಮೆಸರ್ ಮೆಂಟ್ ಬಿಲ್ ಮಾಡಲು ಸತಾಯಿಸುತ್ತಿರುವ ಅಧಿಕಾರಿಗಳ ನಡೆ ಕಂಡ ಗ್ರಾಮಸ್ಥರು ಚರಂಡಿ ಸ್ವಚ್ಚ ಮಾಡಿದ ತ್ಯಾಜ್ಯವನ್ನು ಟ್ರ್ಯಾಕ್ಟರ್ ನಲ್ಲಿ ಇಲಾಖೆಗೆ ಹೊತ್ತು ತಂದು ಬಿಲ್ ಮಾಡಿ ಎಂದಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಚರಂಡಿಗಳನ್ನು ಗ್ರಾಮ ಪಂಚಾಯಿತಿಯವರು ಸ್ವಚ್ಚ ಮಾಡಿಸಿದ್ದಾರೆ. ಚರಂಡಿ ಸ್ವಚ್ಚ ಮಾಡಿದ ಕಾರ್ಮಿಕರಿಗೆ ಹಣ ನೀಡಲು ಮೆಸರ್ ಮೆಂಟ್ ಬಿಲ್ ಮಾಡುವಂತೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗೆ ತಿಳಿಸಿ ಹಲವಾರು ದಿನ ಕಳೆದರೂ ಬಿಲ್ ಮಾಡದ ಕಾರಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ಸರ್ಕಾರಿ ಇಲಾಖೆಗೆ ಟ್ರ್ಯಾಕ್ಟರ್ ನಲ್ಲಿ ಕಸ ತುಂಬಿ ತಂದು ಇಲ್ಲೇ ಬಿಲ್ ಮಾಡಿ ಎಂದಿದ್ದಾರೆ.
ಇನ್ನೂ ಕಮಡೊಳ್ಳಿ ಗ್ರಾಮಸ್ಥರು ಇಲಾಖೆಗೆ ಕಸ ತಂದು 12 ಗಂಟೆ ಆಗ್ತಾ ಬಂದರೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯಾಲಯ ಅಧಿಕಾರಿಗಳು ಬಂದಿರಲಿಲ್ಲ. ನಂತರ ಆಗಮಿಸಿದ ಕಿರಿಯ ಸಹಾಯಕ ಇಂಜಿನಿಯರ್ ಡೇಟ್ ಹಾಕದೆ ಬಿಲ್ ಬರೆದು ಇಟ್ಟಿದ್ದು, ನಿಮ್ಮ ಪಂಚಾಯಿತಿ ಪಿಡಿಓ ಆ ಬಿಲ್ ಪಡೆದಿಲ್ಲ ಎಂದಾಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಪಿಡಿಓ ಸ್ಥಳಕ್ಕೆ ಕರೆಸಿ ವಿಚಾರಿಸೋಣ ಎಂದು ಪಟ್ಟು ಹಿಡಿದ ಪ್ರಸಂಗವೂ ನಡೆಯಿತು. ಜೊತೆಗೆ ದಿನಾಂಕ ಹಾಕದೆ ಬಿಲ್ ಬರೆದದ್ದು ಜನರ ಸಂಶಯಕ್ಕೂ ಕಾರಣವಾಯಿತು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
27/06/2022 02:37 pm