ಪಬ್ಲಿಕ್ ನೆಕ್ಸ್ಟ್ ವಿಶೇಷ: ಶ್ರೀಧರ ಪೂಜಾರ ಕುಂದಗೋಳ
ಕುಂದಗೋಳ : ದೇವರು ವರ ಕೋಟ್ರು ಪೂಜಾರಿ ವರ ಕೊಡಲಿಲ್ಲ ಎಂಬ ಮಾತಿಗೆ ಅನ್ವಯಿಸುವಂತೆ ಪಟ್ಟಣ ಪಂಚಾಯಿತಿ ನೂತನ ಸದಸ್ಯರಿಗೆ ಅಧಿಕಾರ ಇಲ್ಲದೆ ಕುಂದಗೋಳ ಪಟ್ಟಣದ ವಾರ್ಡ್ ಗಳ ಅಭಿವೃದ್ಧಿ ಮಾಯವಾಗಿದೆ.
ಹೌದು ! ಕುಂದಗೋಳ ಪಟ್ಟಣ ಪಂಚಾಯಿತಿ ಸದಸ್ಯರ ಸಾರ್ವತ್ರಿಕ ಚುನಾವಣೆ 2019 ರ ನವೆಂಬರ್ ತಿಂಗಳಲ್ಲೇ ಮುಗಿದು ಡಿಸೇಂಬರ್ 11 ಕ್ಕೆ ನೂತನ ಸದಸ್ಯರ ಫಲಿತಾಂಶ ಹೊರಬಿದ್ದು ವಿಜಯರಾದ 19 ಸದಸ್ಯರಿಗೆ ಇಂದಿಗೂ ಆಡಳಿತಾತ್ಮಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಒದಗಿ ಬಂದಿಲ್ಲ.
ತಮ್ಮ ವಾರ್ಡ್ ಗಳ ಅಭಿವೃದ್ಧಿಗೆ ಜನರು ನೂತನ ಸದಸ್ಯರನ್ನ ಆಯ್ಕೆ ಮಾಡಿದ್ರೂ ಸರ್ಕಾರದಿಂದ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗದ ಕಾರಣ ಚುನಾಯಿತಗೊಂಡ ಸದಸ್ಯರು ಕೇವಲ ಸಭೆ ಸಮಾರಂಭಕ್ಕಷ್ಟೇ ಸೀಮಿತವಾಗಿದ್ದಾರೆ.
ಈ ಸಂಬಂಧ ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೀರು ಸರಬರಾಜು, ಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ಚುನಾಯಿತವಾದ ಸದಸ್ಯರಿಗೆ ಅಧಿಕಾರ ಕೊಡುವಂತೆ ಜನರೇ ಕೇಳಿದ್ರೂ ಸರ್ಕಾರದ ನಿರ್ಧಾರ ಎಲ್ಲವನ್ನು ಹತ್ತಿಕ್ಕಿದೆ.
Kshetra Samachara
18/09/2020 01:24 pm