ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಬಂದಿದ್ದೇ ಬಂದಿದ್ದು, ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಹುಟ್ಟು ಹಾಕುತ್ತಿದೆ. ಇಂದು ಸ್ಮಾರ್ಟ್ ಸಿಟಿಯ ಟಾಯ್ ಟ್ರೇನ್ ಮೊದಲ ದಿನವೇ ಹಳಿತಪ್ಪಿದೆ.
ಹೌದು. ಸ್ಮಾರ್ಟ್ ಸಿಟಿ ಯೋಜನೆ ಹಳಿ ತಪ್ಪಿದೆ ಎಂದು ವಿರೋಧ ಪಕ್ಷದ ನಾಯಕರು, ಸಾರ್ವಜನಿಕರು ಹೇಳುತ್ತಿದ್ದರು ಆದರೆ ಇಂದು ಅವ್ಯವಸ್ಥೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕುಳಿತಿದ್ದ ಟಾಯ್ ಟ್ರೇನ್ ಹಳಿ ತಪ್ಪಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಇನ್ನೂ ಕೇಂದ್ರ ಸಚಿವರು ಹಾಗೂ ಮಾಜಿ ಸಿಎಂ ಕುಳಿತಿದ್ದ ಪುಟಾಣಿ ರೈಲು ಹಳಿ ತಪ್ಪಿದ್ದು, ಆಕ್ರೋಶಗೊಂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಇಂಜಿನಿಯರ್ ಯಾರು ಎಂದು ಕಿಡಿ ಕಾರಿದರು. ಇನ್ನೂ ಸ್ವಲ್ಪದರಲ್ಲಿಯೇ ಸಂಭವಿಸಬಹುದಾದ ಅಪಘಾತ ತಪ್ಪಿದಂತಾಗಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆ ಇಂದು ಪ್ರತ್ಯಕ್ಷವಾಗಿ ಗೋಚರಿಸಿದೆ.
ಒಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಿದ ಸ್ಮಾರ್ಟ್ ಸಿಟಿ ಯೋಜನೆ ಆರಂಭದಲ್ಲಿಯೇ ಮುಗ್ಗರಿಸಿದ್ದು, ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/04/2022 03:46 pm