ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕವಲಗೇರಿ: ರೈತನಿಗೆ ವೈಯಕ್ತಿಕ ಪರಿಹಾರ ನೀಡಿದ ದೇಸಾಯಿ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಬಸಪ್ಪ ಗಂಗೋಜಿ ಎಂಬುವರ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅವರ 2 ಎತ್ತು ಮತ್ತು 1 ಆಕಳು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಅಮೃತ ದೇಸಾಯಿ ಅವರು ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮತ್ತು ತಾವೇ ವೈಯಕ್ತಿಕವಾಗಿ 20 ಸಾವಿರ ಪರಿಹಾರ ನೀಡಿ, ರೈತ ಬಸಪ್ಪ ಅವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕು ಅಧಿಕಾರಿಗಳಿಗೆ, ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯ ಮತ್ತು ಸವಲತ್ತುಗಳನ್ನು ರೈತರಿಗೆ ಕಲ್ಪಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಸಂತೋಷ ಹಿರೇಮಠ, ಕನಕೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಚನ್ನಬಸಪ್ಪ ಕವಳಿ, ಗ್ರಾಮ ಪಂಚಾಯತ ಸದಸ್ಯರಾದ ಮುತ್ತು ಇಂಚಲ, ಅಶೋಕ ನಾವಳ್ಳಿ ಹಾಗೂ ಗ್ರಾಮಸ್ಥರಾದ ತಿಪ್ಪಣ್ಣ ತಿರ್ಲಾಪೂರ, ಮಹಾಂತೇಶ ತಿರ್ಲಾಪುರ, ವಿಶ್ವನಾಥ ಕವಳಿ, ಹುವಾಪ್ಪ ಯಮೋಜಿ, ಸಂತೋಷ ಉಪ್ಪಾರ, ಶೇಕಣ್ಣ ಜಪಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

19/08/2022 07:01 pm

Cinque Terre

16.82 K

Cinque Terre

1

ಸಂಬಂಧಿತ ಸುದ್ದಿ