ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಡವರ ಬದುಕಿಗೆ ಸಂಕಷ್ಟದ ಬರೆ, ಸಿಎಂ ಸಾಹೇಬ್ರೆ ನಿಮ್ಮೂರು ನೋಡಿದ್ರಾ ?

ವಿಶೇಷ ವರದಿ : ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

ಕುಂದಗೋಳ : ದಿ.ಶಿವಳ್ಳಿ ಸಾಹೇಬ್ರು ಬಾಳ್ ಚಲೋ ರಿ. ನಮಗೆಲ್ಲಾ ಇರಾಕ್ ಇಲ್ಲೇ ಜಾಗ ಕೊಟ್ರು, ಮನಿ ಕಟ್ಟಸಾಕ್ ಅನುಕೂಲ ಮಾಡಿಕೊಟ್ರು ಇವತ್ತ್ ಅವ್ರು ಇಲ್ಲಾ. ನಮನ್ನು ನೋಡೋರು ಯಾರು ?

ಹೌದು ! ಈ ಪ್ರಶ್ನೆ ಕೇಳುತ್ತಿರುವವರು ಕುಂದಗೋಳ ಪಟ್ಟಣದ ಅಮರಶಿವ ಬಡಾವಣೆಯ ನಿವಾಸಿಗಳು, ಈ ಹಿಂದೆ ದಿ‌.ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಬಡವರಿಗಾಗಿ ತಮ್ಮ 10 ಎಕರೆ ಭೂಮಿಯನ್ನು 397 ಪ್ಲಾಟ್'ಆಗಿ ನಿರ್ಮಾಣ ಮಾಡಿ ನಿವಾಸ ಕಟ್ಟಿಕೊಳ್ಳಲು ನೀಡಿದ್ದರು, ಆದ್ರೇ ನಿವಾಸ ಕಟ್ಟಿಕೊಳ್ಳುವ ಫಲಾನುಭವಿಗಳಿಗೆ ಇದೀಗ ಕಷ್ಟಗಳ ಸರಮಾಲೆ ಎದುರಾಗಿವೆ, ಈಗಾಗಲೇ ಮನೆ ಕಟ್ಟಿಸಿಕೊಂಡ 215 ಫಲಾನುಭವಿಗಳಿಗೆ ಮೂಲ ಸೌಕರ್ಯಗಳ ಸಮಸ್ಯೆ ಕಾಡ್ತಾ ಇವೆ.

ಅಮರಶಿವ ನಗರಕ್ಕೆ ಸೂಕ್ತ ರಸ್ತೆ, ನೀರು, ಚರಂಡಿ, ವಿದ್ಯುತ್ ಮೂಲ ಸೌಕರ್ಯಗಳ ಲೆಕ್ಕದ ಯಾವುದೇ ಸೌಲಭ್ಯ ಅವರನ್ನು ತಲುಪಿಲ್ಲಾ, ಈ ಕಾರಣ ಈಗಾಗಲೇ ಮನೆ ಕಟ್ಟಿಕೊಂಡವರು ಸರ್ಕಾರಕ್ಕೆ ಅಗತ್ಯ ಸೌಲಭ್ಯ ಕೇಳಿದ್ರೇ, ಕೆಲವರು ಮನೆ ಕಟ್ಟಿಕೊಳ್ಳಲು ಅಮರಶಿವ ನಗರಕ್ಕೆ ಬರಲು ಹಿಂದೇಟು ಹಾಕ್ತಾ ಇದ್ದಾರೆ. ಅಮರಶಿವ ಬಡಾವಣೆ ಸಮಸ್ಯೆ ಏನಿದೆ ಎಂಬುದನ್ನು ಸ್ಥಳಿಯರಿಂದಲೇ ಕೇಳಿ.

ಸದ್ಯ ಅಮರಶಿವ ಪ್ಲಾಟಿನಲ್ಲಿ ವಾಸವಿರುವ ನಿವಾಸಿಗಳು ಸೋಲಾರ್ ಮೂಲಕ ವಿದ್ಯುತ್ ಬಳಸಿದ್ರೇ, ಟ್ಯಾಂಕರ್ ಮೂಲಕ ನೀರನ್ನು ತರಸಿ ಜೀವನ ನಡೆಸುತ್ತಿದ್ದಾರೆ.

ಇನ್ನೂ ವಿಪರ್ಯಾಸ ಎಂದ್ರೇ ಇಲ್ಲಿ ವಾಸಿಸುತ್ತಿರುವ ನಿವಾಸಿಗಳು ಎಲ್ಲರೂ ಬಡ ಕುಟುಂಬದವರೇ, ಕೂಲಿ ಮಾಡಿ ಜೀವನ ಸಾಗಿಸೋರು ಇಂತಹ ಸ್ಥಿತಿಯಲ್ಲಿ ಕೆಲವರಿಗೆ ವಸತಿ ಯೋಜನೆ ಮನೆ ಮಂಜೂರಾದ್ರೂ ಮನೆ ಕಟ್ಟಿಕೊಳ್ಳಲು ಹಣ ಕೈ ಸೇರದ ಕಾರಣ ಗುಡಿಸಲ್ಲೇ ದಿನ ಕಳೆಯುತ್ತಿದ್ದಾರೆ.

ಇನ್ನೂ ಪಟ್ಟಣ ಪಂಚಾಯಿತಿ ಹಾಗೂ ಸ್ಥಳೀಯ ಶಾಸಕರು ಅಮರಶಿವ ಬಡಾವಣೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ರೂ ಇಂದಿಗೂ ಹಣ ಬಂದಿಲ್ಲಾ, ಇದರಿಂದ ಬಡವರ ಬದುಕು ಮತ್ತಷ್ಟೂ ಸಂಕಷ್ಟಕ್ಕೆ ಸಿಲುಕಿದೆ.

ಅಮರಶಿವ ಬಡಾವಣೆಯ ಅಕ್ಕಪಕ್ಕ ಈಗಾಗಲೇ ಅಪರಿಚಿತರ ಸಂಚಾರದ ಜೊತೆ ಕಟ್ಟಡ ಸಾಮಗ್ರಿ ಕಳ್ಳತನವಾಗುತ್ತಿದ್ದು, ಕತ್ತಲಲ್ಲೇ ವಾಸಿಸುವವರಿಗೆ ಕಳ್ಳರ ಭಯ ತಲೆದೋರಿದೆ.

ಈ ಬಗ್ಗೆ ಸಂಬಂಧಪಟ್ಟ ಪೊಲೀಸರು ಸೂಕ್ತ ಕ್ರಮ ಜರುಗಿಸಿ ಅಮರಶಿವ ನಗರದಲ್ಲಿ ಗಸ್ತು ಹಾಕಬೇಕಿದ್ದು, ಘನ ರಾಜ್ಯ ಸರ್ಕಾರ ಪಕ್ಷಬೇಧ ಮಾಡದೇ ಮುಖ್ಯಮಂತ್ರಿಗಳ ತವರೂರಿನ ಅಮರಶಿವ ಬಡಾವಣೆಗೆ ಅಭಿವೃದ್ಧಿ ಸ್ಪರ್ಶ ನೀಡಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/01/2022 07:23 pm

Cinque Terre

110.42 K

Cinque Terre

9

ಸಂಬಂಧಿತ ಸುದ್ದಿ