ನವಲಗುಂದ : ಉತ್ತರ ಪ್ರದೇಶದಲ್ಲಿ ಕೇಂದ್ರ ಜಾರಿಗೆ ತರಲು ಹೊರಟಿರುವ 3 ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಕೇಂದ್ರ ಬಿಜೆಪಿ ಸರಕಾರದ ಮಂತ್ರಿಗಳ ಮಗ ಕಾರು ಹರಿಸಿ ರೈತರ ಸಾವಿಗೆ ಕಾರಣರಾದ ಅವರನ್ನು ಕಾನೂನು ಪ್ರಕಾರ ಭಂದಿಸಿ ಮರಣ ದಂಡನೆ ವಿಧಿಸಬೇಕು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರವನ್ನು ವಜಾಗೊಳಿಸಬೇಕೆಂದು ಯೂತ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಮೌನಾಚಾರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, RGPRS ಧಾರವಾಡ ಜಿಲ್ಲಾ ಸಂಯೋಜಕರಾದ ಆರ್ ಎಚ್ ಕೋನರೆಡ್ಡಿ, ಕಿಸಾನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ್, DCC ಸದಸ್ಯ ಶಿವಾನಂದ ಭೂಮಣ್ಣವರ, ತಾ.ಪಂ ಉಪಾಧ್ಯಕ್ಷ ಕಲ್ಲಪ್ಪ ಹುಬ್ಬಳ್ಳಿ, ಸಂಜೀವರೆಡ್ಡಿ ರಾಯರೆಡ್ಡಿ, ನವಲಗುಂದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ರಂಗರೆಡ್ಡಿ, ಬಸಣ್ಣ ಶಲವಡಿ, ಶಿವಾನಂದ ಚಲವಾದಿ, ಷರೀಫ್ ಗುದಗಿ, ರಾಮು ಮಾಡೊಳ್ಳಿ, ದಾದು ಜಮಖಾನ್, ಬಾಬರ್ ದಫೆಧಾರ, ಮುನ್ನಾ ಕಲ್ಲಕುಟ್ಟರಿ, ಹಸನ್ ಉಪಸ್ಥಿತರಿದ್ದರು.
Kshetra Samachara
05/10/2021 10:25 pm