ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಬಗ್ಗೆ ಸದನ ಸಮಿತಿ ವರದಿ ಕೊಡುತ್ತದೆ. ವರದಿ ನೀಡಿದ ಬಳಿಕ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ, ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈದ್ಗಾ ವಿಚಾರವಾಗಿ ಮೇಯರ್ ಹಾಗೂ ಜನಪ್ರತಿನಿಧಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎಲ್ಲರೂ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಬಹಳಷ್ಟು ಜನ ಆರ್ಜಿ ಕೊಟ್ಟಿದ್ದಾರೆ, ಕೆಲವರು ವಿರೋಧ ಕೂಡಾ ಮಾಡಿದ್ದಾರೆ. ಒಟ್ಟಾರೆ ಜನರ ಭಾವನೆಗಳನ್ನ, ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಕಳೆದ ಮೂರು ವರ್ಷ ಹಬ್ಬ ಆಚರಣೆ ಮಾಡಿಲ್ಲ, ಈ ಮೊದಲು ಯಾವುದೇ ಆಚರಣೆಗೆ ಆರ್ಜಿಗಳು ಬಂದಿಲ್ಲ, ಹೀಗಂತ ಪಾಲಿಕೆ ಕಮೀಷನರ್ ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆಯಿಂದ ಸಮಯ ಕೇಳಿದ್ದಾರೆ. ಅವರೂ ಮಾಹಿತಿ ನೀಡಲಿ, ಎಲ್ಲರೂ ವರದಿ ನೀಡಿದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ, ಎಂದು ಅವರು ಹೇಳಿದರು.
Kshetra Samachara
29/08/2022 05:02 pm