ಕುಂದಗೋಳ : ನಮಗೆ ಖಾಯಂ ನೇಮಕಾತಿ ಕೊಡಿ, ಸೇವಾ ಭದ್ರತೆ ಬೇಕು, ಪಿಂಚಣಿ ಸೌಲಭ್ಯ ಬೇಕು, ನಮ್ಮನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಸರ್ಕಾರ ಈ ಬಗ್ಗೆ ಆದೇಶ ಮಾಡಿ ನಮ್ಮ ಕಷ್ಟಕ್ಕೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ತಾಲೂಕು ಪಂಚಾಯಿತಿಯಿಂದ ತಹಶೀಲ್ದಾರ ಕಚೇರಿವರೆಗೆ ತಮ್ಮ ಬೇಡಿಕೆ ಕೂಗುತ್ತಾ ಸರ್ಕಾರದ ವಿರುದ್ಧ ಧ್ವನಿ ಎತ್ತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಶೀಲ್ದಾರ ಕಚೇರಿ ಆವರಣದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ತಹಶೀಲ್ದಾರ ಬಸವರಾಜ ಮೆಳವಂಕಿ ಅವರಿಗೆ ಮನವಿ ಪತ್ರ ನೀಡಿ ರಾಜ್ಯ ಸರ್ಕಾರಕ್ಕೆ ಮಾಡುವಂತೆ ಬೇಡಿಕೆ ಇಟ್ಟರು.
Kshetra Samachara
26/11/2020 05:51 pm