ಹುಬ್ಬಳ್ಳಿ: ಪರಿಶಿಷ್ಟ ಜಾತಿಯ ಮಗಳು ಸತ್ತರೇ, ಆ ಬಾಲಕಿ ಕುಟುಂಬಕ್ಕೆ ಶವ ಕೊಟ್ಟಿಲ್ಲ.ಇದನ್ನು ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದ್ರೆ ಅವರನ್ನು ಬಂಧಿಸುತ್ತಾರೆ.ಇದು ದೇಶಕ್ಕೆ,ಪ್ರಧಾನಿ ಮೋದಿಗೆ ಶೋಭೆ ತರುತ್ತದೇಯಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಸದಸ್ಯತ್ವ ಅಭಿಯಾನದ ಸಮಾರಂಭದಲ್ಲಿ ಮಾತನಾಡಿದ ಅವರು,ಅಂತ ಅವ್ಯವಸ್ಥೆ, ದುರಾಡಳಿತ ಇದೆಲ್ಲವೂ ಅಂತ್ಯವಾಗಬೇಕಿದ್ರೆ ನೀವು ಸದಸ್ಯರಾಗಬೇಕು. ನೀವು ಮುಂದಿನ ಡಿ ಕೆ ಶಿವಕುಮಾರ್ ಆಗಬೇಕು, ನಾನಾನೇ ತಳ ಊರಿಕೊಂಡು ಕುಳಿತುಕೊಳ್ಳಲು ಬಂದಿಲ್ಲ ಎಂದರು.
ನಮ್ಮ ಅಧಿಕಾರವನ್ನು ವಿಧಾನಸೌಧ, ಜಿಲ್ಲಾ ಪಂಚಾಯತ, ಕಾರ್ಪೊರೇಶನ್ ನಲ್ಲಿ ಇಟ್ಟುಕೊಳ್ಳೋಣ.ಸ್ಟೇಜ್ ಮೇಲೆ ಇದ್ದೋರಲ್ಲ ನಾಯಕರಾಗೊಲ್ಲ, ನಾವು ಜನರ ಮಧ್ಯೆ ಇರೋಣ. ಒಂದು ಕಾಲದಲ್ಲಿ ಇಂದಿರಾ ಗಾಂಧಿ ಹೆಸರು ಹೇಳಿದರೇ ವೋಟ್ ಸಿಗುತ್ತಿತ್ತು.ಈಗ ಆ ಪರಿಸ್ಥಿತಿ ಇಲ್ಲ, ಬಹಳ ಭಾಗಗಳಾಗಿದೆ. ಪಕ್ಷ ಬಿಟ್ಟು ಹೋದವರಿಂದ ಬಹಳ ಬದಲಾವಣೆ ಆಗಿದೆ.ಈ ದೇಶ ಉಳಿಯಬೇಕಾದರೆ ಮಹಿಳೆಯರು, ವಿದ್ಯಾರ್ಥಿಗಳಿಂದ ಸಾಧ್ಯ ಎಂದರು.
Kshetra Samachara
03/10/2020 03:37 pm