ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ ನೋಡಿದರು ಅಸಹಾಯಕರಾದ ಜನಪ್ರತಿನಿಧಿಗಳು

ಹುಬ್ಬಳ್ಳಿ:ಕೊರೋನಾ ವೈರಸ್ ವಿರುದ್ಧದ ಜಗತ್ತೇ ಶತಾಯು ಗತಾಯು ಹೋರಾಟ ನಡೆಸಿದೆ ಮಹಾಮಾರಿಯನ್ನು ಕಟ್ಟಿಹಾಕಲು ಸರ್ಕಾರ ಬಹುತೇಕ ಯೋಜನೆಗಳನ್ನು ಕೈ ಗೆತ್ತಿಕೊಂಡು ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಮುಂದಾಗಿದೆ.ಆದರೇ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಬಹುತೇಕ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ಸುಲಿಗೆಗೆ ಮುಂದಾಗಿದ್ದಾರೆ.

ಹೌದು...ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.ಆದರೂ ಕೂಡ ಜನಪ್ರತಿನಿಧಿಗಳು ಅಸಹಾಯಕತೆ ಎತ್ತಿತೋರತ್ತಿದ್ದು, ದನಗಾಹಿ ಆಸ್ಪತ್ರೆಗಳ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನವೀಯತೆ ಮರೆತು ಹಣ ಪೀಕುತ್ತಿರುವ ಖಾಸಗಿ ಆಸ್ಪತ್ರೆಗಳು.8 ರಿಂದ 9 ಲಕ್ಷ ರೂಪಾಯಿ ಬಿಲ್ ಪಡೆದು, ಬಳಿಕ ಮೃತ ದೇಹ ಕೊಡಲು 3 ಲಕ್ಷ ರೂಪಾಯಿ ಕೇಳುತ್ತಾರೆ.ವೈದ್ಯಕೀಯ ಧರ್ಮವನ್ನು ಮೀರಿ ಖಾಸಗಿ ಆಸ್ಪತ್ರೆಗಳು ಹಣ ಗಳಿಸುವ ಕೆಲಸ ಮಾಡುತ್ತಿವೆ.ಇಂತಹ ಆಸ್ಪತ್ರೆ ಗಳನ್ನು ಬಂದ್ ಮಾಡಿದ್ರೆ, ಸಿಗುವ ಸೌಲಭ್ಯಗಳು ಸಿಗುವುದಿಲ್ಲ ಎಂಬುವಂತ ಮಾತನ್ನು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.ಆದರೇ ಶಿಸ್ತು ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಿಲ್ಲ.

ಆಸ್ಪತ್ರೆಗಳ ಅಮಾನವೀಯ ನಡೆ ದುರ್ದೈವದ ಸಂಗತಿಯಾಗಿದ್ದು,ಹಗಲು ದರೋಡೆ ನಡೆಯುತ್ತಿದ್ದರೂ ಏನು ಮಾಡಲಾಗದೇ ಜನಪ್ರತಿನಿಧಿಗಳು ಅಸಹಾಯಕತೆ ತೋರುತ್ತಿದ್ದಾರೆ.ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Edited By : Nagesh Gaonkar
Kshetra Samachara

Kshetra Samachara

04/11/2020 01:51 pm

Cinque Terre

72.96 K

Cinque Terre

8

ಸಂಬಂಧಿತ ಸುದ್ದಿ