ಕಲಘಟಗಿ: ಧಾರವಾಡ ಜಿಲ್ಲೆಯ ಹಲವು ಭಾಗದಲ್ಲಿ ಇವತ್ತು ಗ್ರಾಮ ಪಂಚಾಯತಿ ಚುನಾವಣೆಯ ಮತದಾನ ಶಾಂತವಾಗಿ ನಡೆಯಿತು. ಇದರ ನಡುವೆ ಕಲಘಟಗಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರನ್ನ ಮತಗಟ್ಟೆಗೆ ಕರೆತಂದು ವೋಟ್ ಹಾಕಲು ಅವಕಾಶ ನೀಡಲಾಗಿದೆ. ಇದರಿಂದ ಇತರ ಮತದಾರರು ಕೊಂಚ ಇರುಸು ಮುರಿಸು ಅನುಭವಿಸಬೇಕಾಯ್ತು.
ಈ ಘಟನೆ ನಡೆದಿದ್ದು ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಪಂ ನೆಲ್ಲಿಹರವಿ ಗ್ರಾಮದಲ್ಲಿ. ಪಿಪಿಈ ಕಿಟ್ ಧರಿಸಿ ಬಂದ ಕೋವಿಡ್ ಸೋಂಕಿತರು ಬೂತ್ ನಂಬರ್ 107ರಲ್ಲಿ ಮತದಾನ ಮಾಡಿದರು.
ಸಂಜೆ ನಾಲ್ಕು ಗಂಟೆ ನಂತರ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಒದಗಿಸಲಾಗಿತ್ತು. ಇದನ್ನೆಲ್ಲ ಗಮನಿಸಿದ ಸಾರ್ವಜನಿಕರು ಅಂಚೆ ಮತಗಳ ಮೂಲಕ ಕೋವಿಡ್ ಸೋಂಕಿತರ ಮತದಾನಕ್ಕೆ ಅವಕಾಶ ನೀಡಬಹುದಿತ್ತು ಎಂದು ಮಾತಾಡಿಕೊಳ್ಳುತ್ತಿದ್ದರು
Kshetra Samachara
22/12/2020 08:04 pm