ಧಾರವಾಡ: ನಿತಿನ್ ಇಂಡಿ.. ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ. ಯುವ ಉತ್ಸಾಹಿ ನಾಯಕ.. ಸದ್ಯ ಧಾರವಾಡದ ಐದನೇ ವಾರ್ಡಿನಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ ನಿತಿನ್ ಅವರಿಗೆ ಬಿಜೆಪಿ ಮಣೆ ಹಾಕಿದೆ. ಪಕ್ಷ ಸಂಘಟನೆಯಲ್ಲಿ ಪಾದರಸದಂತೆ ಕೆಲಸ ಮಾಡಿದ ನಿತಿನ್ ಅವರಿಗೆ ಬಿಜೆಪಿ ಪಕ್ಷ, ಪಾಲಿಕೆ ಚುನಾವಣೆಗೆ ಸ್ಪರ್ಧಿಸುವಂತೆ ಕರೆ ಕೊಟ್ಟಿದೆ. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ಈ ಐದನೇ ವಾರ್ಡಿನಲ್ಲಿ ಶಾಸಕ ಅಮೃತ ದೇಸಾಯಿ ಅವರು ಕೈಕೊಂಡ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ಇದರ ಜೊತೆ ಜೊತೆಗೆ ತನ್ನ ವಾರ್ಡಿಗೆ ಹೊಸ ಸ್ವರೂಪ ನೀಡಲು ಮುಂದಾಗಿದ್ದಾರೆ ನಿತಿನ್ ಇಂಡಿ. ಇದುವರೆಗೂ ಧಾರವಾಡದ ಐದನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಚುನಾಯಿತರಾಗಿಲ್ಲ. ಆದರೆ, ಇದೀಗ ಬಿಜೆಪಿ ಅಭ್ಯರ್ಥಿ ನಿತಿನ್ ಇಂಡಿ ಪರ ಅಲೆ ಬೀಸಿದ್ದು, ಇವರ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಇಂಡಿ ಅವರದ್ದು ಕೃಷಿ ಕುಟುಂಬ ಸ್ವತಃ ನಿತಿನ್ ಅವರೇ ತಮ್ಮದೇ ಮಾಲೀಕತ್ವದಲ್ಲಿ ಡೇರಿ ಫಾರ್ಮ್ ಕೂಡ ನಡೆಸುತ್ತಿದ್ದಾರೆ. ಹೀಗಾಗಿ ಕೃಷಿಕರ ನಾಡಿ ಮಿಡಿತವನ್ನು ಯುವ ನಾಯಕ ನಿತಿನ್ ಚೆನ್ನಾಗಿ ಅರಿತುಕೊಂಡಿದ್ದಾರೆ. ಇವರ ಕುಟುಂಬ ಕೂಡ ಧಾರವಾಡದ ಪ್ರಸಿದ್ಧ ಮುರುಘಾಮಠದೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದೆ. ತನ್ನ ವಾರ್ಡಿಗೆ ಹೊಸತನ ತರಬೇಕು, ಪ್ರಸಿದ್ಧ ಮುರುಘಾಮಠಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದಲೇ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ನಿತಿನ್ ತಾವು ಚುನಾಯಿತರಾಗಿ ಆಯ್ಕೆ ಆದಿದ್ದೇ ಆದಲ್ಲಿ ಏನೆಲ್ಲ ಕಾರ್ಯಗಳನ್ನು ಮಾಡಬೇಕು ಎಂದುಕೊಂಡಿದ್ದಾರೆ ಅನ್ನೋದನ್ನ ಸ್ವತಃ ಅವರೇ ಹೇಳುತ್ತಾರೆ ಕೇಳಿ
ಈಗಾಗಲೇ ನಿತಿನ್ ಅವರು ತಮ್ಮ ವಾರ್ಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇವರಿಗೆ ಸಿಕ್ಕಿರುವ ಜನ ಬೆಂಬಲ ನೋಡಿದರೆ ಇಂಡಿ ಅವರ ಗೆಲುವು ನಿಶ್ಚಿತ ಎನ್ನಲಾಗಿದೆ. ಬಿಜೆಪಿ ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿಕೊಂಡು, ಸಂಘಟನೆ ಮಾಡಿದ ನಾಯಕರು ಕೂಡ ಇಂಡಿ ಅವರ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಸಕ್ತ ವರ್ಷ ಐದನೇ ವಾರ್ಡಿನಲ್ಲಿ ಕಮಲ ಅರಳಿಸಿಯೇ ತೀರುತ್ತೇವೆ ಎನ್ನುತ್ತಿದ್ದಾರೆ.
ನಿತಿನ್ ಇಂಡಿ ಪರವಾಗಿ ಹಾಲಿ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಕೂಡ ಪ್ರಚಾರ ಕಣಕ್ಕಿಳಿದಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಗೆ ಬರುವ ಈ 9ನೇ ವಾರ್ಡಿನಲ್ಲಿ ಶಾಸಕ ಅಮೃತ ದೇಸಾಯಿ ಅವರು ಒಟ್ಟು 6 ಕೋಟಿ 95 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಪಕ್ಷದ ಮುಖಂಡರೆಲ್ಲ ಸೇರಿ ಯುವ ಉತ್ಸಾಹಿ ನಾಯಕನಿಗೆ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಿ ನಿತಿನ್ ಇಂಡಿ ಅವರಿಗೆ ಟಿಕೆಟ್ ನೀಡಿದ್ದೇವೆ. ಶಾಸಕರ ಅಭಿವೃದ್ಧಿ ಕೆಲಸಗಳು ಹಾಗೂ ನಿತಿನ್ ಅವರ ಕೆಲಸ ಮಾಡಬೇಕೆನ್ನುವ ಉತ್ಸಾಹ ಅವರಿಗೆ ಶ್ರೀರಕ್ಷೆಯಾಗಲಿದೆ. ಎರಡೂವರೆ ಸಾವಿರ ಮತಗಳ ಅಂತರದಿಂದ ಐದನೇ ವಾರ್ಡಿನಲ್ಲಿ ನಾವು ವಿಜಯ ಪತಾಕೆ ಹಾರಿಸುತ್ತೇವೆ ಎಂದು ಈರಣ್ಣ ಹಪ್ಪಳಿ ತಿಳಿಸಿದರು.
ನಿತಿನ್ ಅವರು ತಮ್ಮದೇ ಆದ ಉತ್ತಮ ಸ್ನೇಹ ಬಳಗ ಹೊಂದಿದ್ದಾರೆ. ಇವರು ಸಣ್ಣ ವಯಸ್ಸಿನಲ್ಲೇ ಬಿಜೆಪಿ ನಾಯಕರ ಗಮನಸೆಳೆದಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಇವರು, ರಾಜಕಾರಣದ ಮೂಲಕ ಜನತೆಗೆ ಒಳ್ಳೆಯದನ್ನು ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಏನೇ ಆಗಲಿ ಅತೀ ಸಣ್ಣ ವಯಸ್ಸಿನಲ್ಲೇ ರಾಜಕೀಯಕ್ಕೆ ಧುಮಿಕಿ ಹೊಸ ಸಂಚಲನ ಸೃಷ್ಟಿಸಿರುವ ನಿತಿನ್ ಅವರಿಗೆ ಗೆಲುವು ಲಭಿಸಲಿ. ಅವರ ಮೂಲಕ ಐದನೇ ವಾರ್ಡ್ ಸಮಗ್ರ ಅಭಿವೃದ್ಧಿ ಕಾಣಲಿ ಎಂಬುದೇ ನಮ್ಮ ಹಾರೈಕೆ.
Kshetra Samachara
25/08/2021 03:23 pm