ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನರ ಒತ್ತಾಯಕ್ಕೆ ಮಣಿದು ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಹೇಮಲತಾ ಶಿವಮಠ!

ಹುಬ್ಬಳ್ಳಿ: ಇವರು ಕ್ರಿಯಾಶೀಲ ಹಾಗೂ ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡವರು. ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು. ಆದರೆ ಈಗ ಅವರಿಗೆ ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರ ವ್ಯಾಪ್ತಿ, ಮಹಿಳಾ ವರ್ಗಕ್ಕೆ ಮೀಸಲಿರುವ 62 ನೇ ವಾರ್ಡ್ ನ ಕಾಂಗ್ರೆಸ್ ಟಿಕೆಟ್ ನಿರಾಕರಿಸಿರುವುದು ದುರದೃಷ್ಟಕರ ಎನ್ನುತ್ತಾರೆ ಅಲ್ಲಿಯ ಮತದಾರರು. ಹೀಗಾಗಿ ಈಗ ಹೇಮಲತಾ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಅನಿವಾರ್ಯವಾಗಿದೆ. ಇಷ್ಟೇ ಅಲ್ಲ ಇಲ್ಲಿನ ನಿವಾಸಿಗಳೂ ಸಹ ಚುನಾವಣೆಗೆ ನಿಲ್ಲಲೇ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಷ್ಟಕ್ಕೂ ಅವರು ಯಾರು ಅಂತೀರಾ? ಈ ಸ್ಟೋರಿ ನೋಡಿ...

ಹೀಗೆ ಒಂದು ಕಡೆ ಕಾಂಗ್ರೆಸ್ ಕಾರ್ಯಕರ್ತರು, ಇನ್ನೊಂದು ಕಡೆ ನಿವಾಸಿಗಳ ಜೊತೆ ಚರ್ಚೆ ಮಾಡುತ್ತಿರುವ ಇವರ ಹೆಸರು ಹೇಮಲತಾ ಶಿವಮಠ, ಬಿ.ಎ ಹಾಗೂ ಎಮ್ ಎಸ್ ಡಬ್ಲ್ಯೂ ಪದವೀಧರೆಯಾಗಿರುವ ಇವರು ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿ ವಿವಿಧ ಹಂತಗಳಲ್ಲಿ ಅಹರ್ನಿಶಿ ದುಡಿಯುತ್ತ ಬಂದಿದ್ದಾರೆ. ಇದೇ ಕಾರಣಕ್ಕೆ ಈ ಬಾರಿ ಅವರಿಗೆ ಪಾಲಿಕೆ ಚುನಾವಣೆ ಟಿಕೆಟ್ ನೀಡುತ್ತೇವೆ ಎಂಬ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು ಆದರೇ ಆ ಟಿಕೆಟ್ ಬೇರೆಯವರ ಪಾಲಾಗಿದ್ದು ಈಗ ಇವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ..

ಹುಬ್ಬಳ್ಳಿ - ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಹೇಮಲತಾ ಅವರು ಈ ಹಿಂದೆ ಲೋಕಸಭೆ, ವಿಧಾನಸಭೆ ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ ಹಾಗೂ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇವರು ಬಡವರ ಪರ ನಿಂತು ಸೂರು ಇಲ್ಲದ ಜನರಿಗೆ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ಮಂಜೂರ ಮಾಡಿಸುವಲ್ಲಿ ಸಫಲರಾಗಿದ್ದಾರೆ.

ಸರಕಾರದ ವಿವಿಧ ಯೋಜನೆಯಡಿ ಅಂಗವಿಕಲರಿಗೆ ಮಾಸಾಶನ , ವಿಧವಾವೇತನಗಳನ್ನು ಮಂಜೂರ ಮಾಡಿಸಿದ್ದಾರೆ. ಹಿಂದುಳಿದವರಿಗೆ , ಅಲ್ಪಸಂಖ್ಯಾತರಿಗೆ , ಪರಿಶಿಷ್ಟ ಜಾತಿ , ಪರಿಶಿಷ್ಟ ಜನಾಂಗದವರಿಗೆ ನಿಗಮದಿಂದ ದೊರೆಯತಕ್ಕ ಸಾಲ ಸೌಲಭ್ಯಗಳನ್ನು ಮಂಜೂರ ಮಾಡಿಸಿದ್ದಾರೆ. ಈ ಎಲ್ಲಾ ಕೆಲಸ ನೋಡಿದ ಜನರು ಈಗ ಇವರೇ ನಮ್ಮ ನಾಯಕಿ, ಪಾಲಿಕೆ ಚುನಾವಣೆಯಲ್ಲಿ ಗೆಲ್ಲಿಸಿ ಪಾಲಿಕೆ ಸದಸ್ಯರನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಸುಮಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದ ಇವರು, ಸಂಘಟನೆ ಜೊತೆಗೆ ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಹೇಮಲತಾ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಈಗ ಕೊನೆಯ ಹಂತದಲ್ಲಿ ಕೈಬಿಟ್ಟಿದೆ, ಇದರಿಂದ ಅಸಮಾಧಾನಗೊಂಡಿರುವ ಇಲ್ಲಿನ ಜನತೆ ಆರ್ಶೀವಾದ ಹಾಗೂ ಬೆಂಬಲವನ್ನು ಪಡೆದ ಇವರು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ವಿರೋಧಿ ಬಣ್ಣಕ್ಕೆ ಟಕ್ಕರ್ ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Edited By : Manjunath H D
Kshetra Samachara

Kshetra Samachara

21/08/2021 05:30 pm

Cinque Terre

92.14 K

Cinque Terre

9

ಸಂಬಂಧಿತ ಸುದ್ದಿ