ಹುಬ್ಬಳ್ಳಿ: ಇವರು ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮೂಡಿಸಿದವಳು, ಮಕ್ಕಳ ತಪ್ಪುಗಳನ್ನು ತಿದ್ದಿ ತಿಡಿ ಸರಿದಾರಿಗೆ ತರಲು ಶ್ರಮಿಸಿದವಳು, ಶಿಕ್ಷಣ ಕ್ಷೇತ್ರದಲ್ಲಿ 6 ವರ್ಷ ಸೇವೆ ಸಲ್ಲಿಸಿ, ಇದೀಗ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಮಹದಾಸೆ ಹೊತ್ತು, ಸಾಮಾಜಿಕ ಸೇವೆಗೆ ಮುಂದಾಗಿದ್ದಾಳೆ. ಅಷ್ಟಕ್ಕೂ ಇವರು ಯಾರು ಎನೆಲ್ಲಾ ಕನಸು ಹೊತ್ತು ರಾಜಕೀಯ ಎಂಟ್ರಿ ಕೋಡುತ್ತಿದ್ದಾಳೆ ಎಂಬುದು ತೋರಸ್ತೇವಿ ನೋಡಿ......
ಹೀಗೆ ಒಂದು ಕಡೆ, ಮಕ್ಕಳಿಗೆ ಪಾಠ ಇನ್ನೊಂದಡೆ ವಾರ್ಡಿನ ನಿವಾಸಿಗಳ ಸಮಸ್ಯೆಗಳನ್ನು ಕೇಳುತ್ತಿರುವ ಇವರಯ ಹೆಸರು ಸರೀತಾ ಶೇಟ್ ರಾಯಚೂರ. ಹುಬ್ಬಳ್ಳಿಯ ಗೋಕುಲ್ ರೋಡ ಶಿವಪುರ ಕಾಲೋನಿ ನಿವಾಸಿ. ಇನ್ನೂ ಇವರು, ಬಿ.ಬಿ.ಎ, ಎನ್.ಟಿ.ಸಿ, ಬಿ.ಎಡ್ ಪದವಿ ಪಡೆದು, ಇಲ್ಲಿನ ಉಣಕಲ್ ನ ಪಾಟೀಲ್ ಕಾನ್ವೆಂಟ್ ಸ್ಕೂಲ್ ನ ಮುಖ್ಯೋಪಾಧ್ಯಕಿಯಾಗಿರುವ ಸರೀತಾ ರಾಯಚೂರು, ವುಮೆನ್ಸ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಸಕ್ರೀಯ ಸದಸ್ಯರಾಗಿದ್ದಾರೆ. ಅಲ್ಲದೇ ಸಾಮಾಜಿಕ ಕಳಕಳಿಯನ್ನು ಉಸಿರಾಗಿಸಿಕೊಂಡು ಮುನ್ನಡೆಯುತ್ತಿರುವ ಸರಿತಾ ಅವರಿಗೆ, ತಮ್ಮ ತವರಿನ ಸಾಮಾಜಿಕ ಸೇವೆ ಮಾಡುವ ಮಹದಾಸೆ. ಶೈಕ್ಷಣಿಕ ವೃತ್ತಿ ಬದುಕಿನಲ್ಲಿ ಬಡ ಮಕ್ಕಳ ಶಿಕ್ಷಣ, ಆರ್ಥಿಕ ದುರ್ಬಲರ ಆರೋಗ್ಯ, ಧಾರ್ಮಿಕ ಸೇವೆಗಾಗಿ ತನು - ಮನ - ಧನ ಸಹಾಯ ಮಾಡುತ್ತಾ ಬಂದಿರುವ ಇವರು, ಅನಾಥ ಮಕ್ಕಳ ಶೈಕ್ಷಣಿಕ ಹಿತಕ್ಕೆ ಸಹಾಯ ನೀಡುತ್ತಲೇ ಬಂದಿರುವ ಇವರಿಗೆ, ಸ್ಥಳೀಯ ನಿವಾಸಿಗಳು ತಮ್ಮ ಆಸೆಯಂತೆ ಈಗ ವಾರ್ಡ್ ನಂಬರ 54 ರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮೇರೆಗೆ ಈಗ ಅಖಾಡಕ್ಕೆ ಇಳದಿದ್ದಾರೆ.
ಇನ್ನು ಇವರ ತಂದೆ ದಿ.ಸುರೇಶ ಶೇಟ್ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದರು. ಗೋಕುಲ ರಸ್ತೆಯ ಶಿವಪುರ ಕಾಲನಿಯಲ್ಲಿ ಬೃಹತ್ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಅಲ್ಲದೇ ಹಲವಾರು ಸಾಮಾಜಿಕ ಕಾರ್ಯಗಳಿಂದ ನಾಯಕರಾಗಿದ್ದರು. ಅವರ ಮಾರ್ಗದರ್ಶನದಲ್ಲೇ ಸರೀತಾ ಶೇಟ್ ರಾಯಚೂರು ಉತ್ತರ ಜನಶಕ್ತಿ ಸೇನಾ ಪಕ್ಷದಿಂದ, ಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, ವಾರ್ಡ್ ನಂಬರ್ 54 ರಲ್ಲಿ ಸ್ಪರ್ಧೆ ಮಾಡುತ್ತಿದ್ದು, ಈ ಮೂಲಕ ದುರ್ಬಲರ ಧ್ವನಿಯಾಗಿ, ಸೇವೆಯ ಸಹಕಾರಿಯಾಗಿ, ಧರ್ಮ ಕಾರ್ಯಗಳ ಬೆಂಬಲಕ್ಕೆ ನಿಂತು, ಸಾಮಾಜಿಕ ನ್ಯಾಯದೊಂದಿಗೆ, ಸರ್ವಜನಾಂಗಗಳು ಒಟ್ಟಾಗಿ ಬದುಕುವ ನಿಟ್ಟಿನಲ್ಲಿ, ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಇವರ ನಿರ್ಧಾರಕ್ಕೆ ಸ್ಥಳೀಯರ ಸಾಥ್ ನೀಡಿ ಪಾಲಿಕೆ ಚುನಾವಣೆಯಲ್ಲಿ ಬೆಂಬಲ ಸೂಚಿಸಿದ್ದಾರೆ.
ನಮ್ಮ ಭಾರತದ ಭವಿಷ್ಯಕ್ಕೆ ಯುವಕರೇ ಮೊದಲ ಆಸ್ತಿ ಎಂದು ನಂಬಿರುವ ಸರೀತಾ ರಾಯಚೂರು, ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಮಾದರಿ ನಗರವನ್ನಾಗಿಸುವ ಕನಸು ಹೊತ್ತಿದ್ದು, ಇವರ ಕನಸು ನೆನಸಗಾಲಿ ಎಂಬುವುದೇ ಜನರ ಆಶಯವಾಗಿದೆ.
Kshetra Samachara
15/08/2021 05:53 pm