ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: 28ಕ್ಕೆ ಪಟ್ಟಣ ಪಂಚಾಯತ್ 14ನೇ ವಾರ್ಡ್‌ನ ಉಪಚುನಾವಣೆ

ಕಲಘಟಗಿ: ಕಲಘಟಗಿ ಪಟ್ಟಣದ 14ನೇ ವಾರ್ಡಿನ ಮರು ಚುನಾವಣೆ ಇದೆ ಅಕ್ಟೋಬರ್ 28ರಂದು ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಮುರಳಿಧರ ಪಾಲಕರ ಅವರು ಪಕ್ಷೇತರರಾಗಿ ಚುನಾವಣೆಯಲ್ಲಿ ಜಯಗಳಿಸಿದ್ದರು.

ಹೃದಯಾಘಾತದಿಂದ ಅವರು ಕೆಲವು ತಿಂಗಳುಗಳ ಹಿಂದೆ ನಿಧನರಾಗಿದ್ದು 14 ನೇ ವಾರ್ಡಿನ ಸ್ಥಾನ ತೆರವುಗೊಂಡಿದೆ. ಹೀಗಾಗಿ ಈ ಸ್ಥಾನಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಾರ ಚುನಾವಣೆ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 17/10/2022 ಇದ್ದು ನಾಮಪತ್ರ ಪರಿಶೀಲನಾ ದಿನಾಂಕ 18/10/2022 ರಂದು ಇರುತ್ತದೆ. ನಾಮಪತ್ರ ಸಲ್ಲಿಸಿದವರು ಹಿಂದೆ ತೆಗೆದುಕೊಳ್ಳಲು 20/10/2022 ಅವಧಿ ನೀಡಿದ್ದು ಮತದಾನ ದಿನಾಂಕ 28/10/2022ರಂದು ನಿಗದಿ ಪಡಿಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

10/10/2022 05:32 pm

Cinque Terre

38.21 K

Cinque Terre

0

ಸಂಬಂಧಿತ ಸುದ್ದಿ