ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ತಮ್ಮ ವಾರ್ಡ್ ಸಮಸ್ಯೆಗಳನ್ನು ವ್ಯಕ್ತಪಡಿಸಲು ಸರಿಯಾದ ರೀತಿಯಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಚುನಾಯಿತ ಸದಸ್ಯರು ಆಸನವನ್ನು ಬಿಟ್ಟು ಮೇಯರ್ ಆಸನದ ಮುಂದೆ ಗಲಾಟೆ ನಡೆಸಿದರು.
ಹೌದು... ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಾರತಮ್ಯ ಮಾಡಲಾಗುತ್ತಿದೆ. ಸರಿಯಾದ ರೀತಿಯಲ್ಲಿ ಅವಕಾಶ ನೀಡುತ್ತಿಲ್ಲ. ಅಲ್ಲದೇ ಸಾಕಷ್ಟು ಸಮಸ್ಯೆಗಳ ಚರ್ಚೆ ಮಾಡಲು ಬಂದಿದ್ದು, ಯಾವುದೇ ರೀತಿಯ ಅವಕಾಶ ಸಿಗದೇ ಸಾಮಾನ್ಯ ಸಭೆ ಮುಕ್ತಾಯಗೊಳ್ಳುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯೆ ಸುವರ್ಣ ಕಲಕುಂಟ್ಲ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಆಸನವನ್ನು ಬಿಟ್ಟು ಮಹಾಪೌರರ ಆಸನದ ಮುಂದೆ ಬಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಮಸ್ಯೆಗಳ ಬಗ್ಗೆ ಹೇಳಲು ನಾವು ಸಭೆಗೆ ಬಂದಿದ್ದೇವೆ ವಿನಃ ಟೈಮ್ ಪಾಸ್ ಮಾಡಲು ಅಲ್ಲ ಎಂದು ಪಾಲಿಕೆ ಸದಸ್ಯರು ಸಭೆಯಲ್ಲಿಯೇ ಗಲಾಟೆ ನಡೆಸಿದರು.
Kshetra Samachara
25/08/2022 02:07 pm