ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಮಕ್ಕಳ ಮೊಟ್ಟೆಯಿಂದ ದುಡ್ಡು ತಿಂದವರಿಗೆ ದೇಶಾಭಿಮಾನ ಬಗ್ಗೆ ಹೇಳುವ ನೈತಿಕತೆ ಇಲ್ಲ"

ಹುಬ್ಬಳ್ಳಿ: ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸುವ ಹಿನ್ನಲೆಯಲ್ಲಿ ಭರ್ಜರಿ ತಯಾರಿ ನಡೆಸಿರುವ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್, ಹುಬ್ಬಳ್ಳಿಯ ಸರ್ಕಿಟ್ ಹೌಸ್ ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಮೊಟ್ಟೆ ಹೊಡೆದು ದುಡ್ಡು ಮಾಡೋಕೆ ಅವರಿಗೆ ಬರುತ್ತೆ. ಆದರೆ, ಜನರಿಗೆ ದೇಶಾಭಿಮಾನದ ದುಡ್ಡು ಕೊಟ್ಟು ರಾಷ್ಟ್ರ ಧ್ವಜ ಖರೀದಿ ಮಾಡುವಂತೆ ಹೇಳುತ್ತಾರೆ. ನಮ್ಮ ದೇಶಭಕ್ತಿ ಬಗ್ಗೆ ಮಾತನಾಡುವುದಕ್ಕೆ ಬಿಜೆಪಿ ಅವರಿಗೆ ಏನು ನೈತಿಕತೆ ಇದೆ!? ಅವರ ದೇಶಭಕ್ತಿ ಬಗ್ಗೆ ಅವರು ಏನು ಅನ್ಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ಜನರ ದುಡ್ಡು- ಮಕ್ಕಳ ಮೊಟ್ಟೆ ಕೊಳ್ಳೆ ಹೊಡೆದಾಗಲೇ ಅವರ ದೇಶಭಕ್ತಿ ಏನು ಅಂತ ಗೊತ್ತಾಗುತ್ತೆ ಎಂದರು.

Edited By : Somashekar
Kshetra Samachara

Kshetra Samachara

02/08/2022 01:40 pm

Cinque Terre

18.27 K

Cinque Terre

5

ಸಂಬಂಧಿತ ಸುದ್ದಿ