ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಸುಗಲ್ ಗ್ರಾಮದಲ್ಲಿ ಉತ್ಸಾಹದ ಮತದಾನ

ಹುಬ್ಬಳ್ಳಿ: ಕುಸುಗಲ್ ಗ್ರಾಮ ಪಂಚಾಯತಿ ಚುನಾವಣೆಗೆ ಮುಂಜಾನೆಯಿಂದಲೇ ಉತ್ಸಾಹದ ಮತದಾನ ಕಂಡುಬಂದಿತು.

ಕೋವಿಡ್ ಹಿನ್ನಲೆಯಲ್ಲಿ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ ಹ್ಯಾಂಡ್ ಸ್ಯಾನಿಟೈಜರ್ ನೀಡಿ, ಮತಗಟ್ಟೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಕಂಡುಬಂದಿತು.

ಬೆಳಿಗ್ಗೆ 10:30 ರ ವೇಳೆಗೆ ಶೇ 15 ರಷ್ಟು ಮತದಾನ ದಾಖಲಾಗಿದೆ. ಅಂಗವಿಕಲ ಮತದಾರರಿಗೆ ಮನೆಯಿಂದ ಆಗಮಿಸಲು ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ತ್ರಿಚಕ್ರ ಸೈಕಲ್ ನಲ್ಲಿ ಸಹಾಯಕರು ಮತಗಟ್ಟೆ ಕರೆದೊಯ್ಯದು ಮತ ಚಲಾಯಿಸಲು ಸಹಕರಿಸಿದರು. ವಿಕಲ ಚೇತನ ಶಿವಪುತ್ರಪ್ಪ ಬಸಪ್ಪ ದೇವಣ್ಣನವರು ಮತಗಟ್ಟೆ ಸಂಖ್ಯೆ 23 ರಲ್ಲಿ ಮತ ಚಲಾಯಿಸಿದರು.

Edited By : Manjunath H D
Kshetra Samachara

Kshetra Samachara

27/12/2020 10:54 am

Cinque Terre

22.79 K

Cinque Terre

0

ಸಂಬಂಧಿತ ಸುದ್ದಿ