ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಿನ್ನೆ ಚುನಾವಣೆ ಜರುಗಿದ್ದು, ಎಲ್ಲ ಅಭ್ಯರ್ಥಿಗಳ ಹಣೆಬರಹ ನ.2 ಕ್ಕೆ ನಿರ್ಧಾರವಾಗಲಿದೆ.
ಉತ್ತರ ಕನ್ನಡ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನಿನ್ನೆ ಬ್ಯಾಲೆಟ್ ಪೇಪರ ಮೂಲಕ ಮತದಾನ ಮಾಡಲಾಗಿದ್ದು, ನಾಲ್ಕೂ ಜಿಲ್ಲೆಗಳಲ್ಲಿನ ಮತಪೆಟ್ಟಿಗೆಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿನ ಸ್ಟ್ರಾಂಗ್ ರೂಮ್ ಗೆ ತಂದಿಡಲಾಗಿದೆ.
ಸಾರಿಗೆ ಸಂಸ್ಥೆ ವಾಹನಗಳ ಮೂಲಕ ಅಭ್ಯರ್ಥಿಗಳ ಭವಿಷ್ಯದ ಪೆಟ್ಟಿಗೆಗಳನ್ನು ತರಲಾಗಿದ್ದು, ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ನಲ್ಲಿಟ್ಟು ಅದಕ್ಕೆ ಬೀಗ ಮುದ್ರೆ ಒತ್ತಲಾಗಿದೆ.
ಅಲ್ಲದೇ ಸ್ಟ್ರಾಂಗ್ ರೂಮ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.
Kshetra Samachara
29/10/2020 11:33 am