ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊರೊನಾ ನಿಯಮಾವಳಿ ಪ್ರಕಾರವೇ ಮತದಾನ ಆರಂಭ

ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆಗೆ ಧಾರವಾಡ ಜಿಲ್ಲೆಯಲ್ಲಿ ಮತದಾನ ಆರಂಭಗೊಂಡಿದ್ದು ಬೆಳಿಗ್ಗೆಯಿಂದಲೇ ಪದವೀಧರ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಕೊರೊನಾ ನಿಯಮಾವಳಿಗಳ ಪ್ರಕಾರವೇ ಮತದಾನ ನಡೆಯುತ್ತಿದ್ದು ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ನಗರದ ಸಾರಸ್ವತಪುರ ಸರ್ಕಾರಿ ಮಾದರಿ ಶಾಲೆ ಹಾಗೂ ಬಾಸೆಲ್ ಮಿಶನ್ ಬಾಲಕರ ಪ್ರೌಡ ಶಾಲೆ ಸೇರಿದಂತೆ ಕೆಸಿಡಿ ಸೇರಿ ಒಟ್ಟು 54 ಮತಕಟ್ಟೆ ಕಡೆ ಮತದಾನ ಮತಕಟ್ಟೆಗಳಿದ್ದು, ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 74,268 ಜನ ಮತದಾರರಿದ್ದಾರೆ. ಅದರಲ್ಲಿ 47,584 ಪುರುಷ ಮತದಾರರಿದ್ದರೆ, 26,173 ಮಹಿಳಾ ಮತದಾರರಿದ್ದಾರೆ. ಇತರೆ 511 ಜನ ಮತದಾರರಿದ್ದಾರೆ.

Edited By : Manjunath H D
Kshetra Samachara

Kshetra Samachara

28/10/2020 01:00 pm

Cinque Terre

20.39 K

Cinque Terre

0

ಸಂಬಂಧಿತ ಸುದ್ದಿ