ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಜೋಶಿಯವರ ಜೋಶ್: ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡಿಸಿದ ಕೇಂದ್ರ ಸಚಿವರು

ಹುಬ್ಬಳ್ಳಿ: ಸಾಕಷ್ಟು ರಾಜಕೀಯ ಒತ್ತಡದಲ್ಲಿ ಇದ್ದರೂ ಕೂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆಯೇ ಫುಲ್ ರಿಲ್ಯಾಕ್ಸ್ ಮೂಡ್‌ಗೆ ಬರುತ್ತಾರೆ. ವಯಸ್ಸಿಗೂ ಮೀರಿದ ಹುಮ್ಮಸ್ಸಿನ ಮೂಲಕ ಯುವಕರಂತೆಯೇ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೋಶಿ ಅವರು ಫುಲ್ ಜೋಶ್‌ನಲ್ಲಿರುತ್ತಾರೆ.

ಹೌದು. ಈಗಾಗಲೇ ಕೇಂದ್ರ ಸರ್ಕಾರದ ಹರ್ ಘರ ತಿರಂಗಾ ಅಭಿಯಾನ ಇಂದಿನಿಂದ ಆರಂಭವಾಗಿದ್ದು, ಹುಬ್ಬಳ್ಳಿಯ ಸಾಯಿನಗರದಲ್ಲಿ ಹರ ಘರ್ ತಿರಂಗಾ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ ನೀಡಿದ್ದು, ವಾದ್ಯಗಳನ್ನು ನುಡಿಸುವ ಮೂಲಕ ಜೋಶಿ ಅವರು ಜೋಶ್ ನಲ್ಲಿಯೇ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.

ಸದ್ಯ ರಾಜಕಾರಣದಲ್ಲಿ ಎಲ್ಲರನ್ನೂ ಮನಸ್ಸಿನಲ್ಲಿ ಮಾತ್ರವಲ್ಲದೆ ಧಾರವಾಡ ಜಿಲ್ಲೆಯ ಜನರಿಗೆ ಅಭಿವೃದ್ಧಿ ಕಾರ್ಯದ ಮೂಲಕ ಜೋಶ್ ಹುಟ್ಟಿಸಿರುವ ಜೋಶಿ ಅವರು ಡ್ರಮ್ ಸೆಟ್ ಬಾರಿಸುವ ಮೂಲಕ ನೆರೆದಿದ್ದವರಲ್ಲಿ ರೋಮಾಂಚನ ಸೃಷ್ಟಿಸಿದ್ದಾರೆ. ಇನ್ನೂ ಸ್ವತಃ ಕೇಂದ್ರ ಸಚಿವರೇ ಸ್ಟೇಫ್ ಹಾಕುವ ಮೂಲಕ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ತಿರಂಗಾ ನಡೆಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಜೋಶ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡಿರುವುದು ವಿಶೇಷವಾಗಿದೆ.

Edited By : Somashekar
Kshetra Samachara

Kshetra Samachara

12/08/2022 06:24 pm

Cinque Terre

38.92 K

Cinque Terre

2

ಸಂಬಂಧಿತ ಸುದ್ದಿ