ಹುಬ್ಬಳ್ಳಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಕರೆ ವಿಚಾರಕ್ಕೆ ಸಂಬಂಧಿಸಿದಂತೆ, ಈ ಕುರಿತು ಸಮಗ್ರವಾದ ತನಿಖೆ ನಡೆಯುತ್ತಿದೆ. ಇ-ಮೇಲ್ ಎಲ್ಲಿಂದ ಬಂತು? ಯಾರು ಕಳಿಸಿದ್ದಾರೆ? ಅಂತ ಪರಿಶೀಲಿಸ್ತೇವೆ. ಇದೆಲ್ಲ ಪತ್ತೆಯಾದ ನಂತರ ಕೇಂದ್ರ ಸರ್ಕಾರದ ಸಹಾಯದಿಂದ ಯಾವ ದೇಶದಿಂದ ಬಂದಿದೆ ಅನ್ನೋದನ್ನ ಪತ್ತೆ ಹಚ್ಚುತ್ತೇವೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ-ಮೇಲ್ ಯಾವ ವ್ಯಕ್ತಿ ಕಳಿಸಿದ್ದಾನೆ ಎಲ್ಲವನ್ನೂ ತನಿಖೆ ನಡೆಸಲಾಗುವುದು. ಕೆಲವೊಮ್ಮೆ ಇಲ್ಲಿಯೇ ಕೂತು ಕೆಲವರು ಬೇರೆ ದೇಶದಿಂದ ಕಳಿಸಿದಂತೆ ಭಾಸವಾಗುತ್ತೆ. ಇದಕ್ಕೆ ಕೇಂದ್ರದ ಸಹಕಾರದಿಂದ ಇ-ಮೇಲ್ ಮೂಲ ಪತ್ತೆ ಹಚ್ಚಲಾಗುವುದು. ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದರ ಬುಡದವರೆಗೂ ನಾವು ತನಿಖೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/04/2022 01:31 pm